204 ನೇ ವಿಶೇಷ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಉಜಿರೆ: ಈ ದಿನ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ 204 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್‌ ಪಾಯಸ್ ರವರು ಶಿಬಿರಾರ್ಥಿಗಳಿಗೆ ಹಾಗೂ ಮನೆಯವರನ್ನು ಉದ್ದೇಶಿಸಿ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಸ್ಥಾಪಕಧ್ಯಕ್ಷರಾದ ಶ್ರೀ ವಸಂತ್ ಸಾಲಿಯಾನ್, ಕರ್ನಾಟಕ ದಲಿತ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ಮುನಿಯಪ್ಪ, ಶಿಬಿರದ ವೈದ್ಯಾಧಿಕಾರಿಗಳಾದ ಡಾ.ಮೋಹನ್ ದಾಸ್ ಗೌಡ, ಯೋಜನಾಧಿಕಾರಿ ಶ್ರೀ ಮೋಹನ್ , ಕಚೇರಿಯ ಪ್ರಬಂಧಕರು, ಆರೋಗ್ಯ ಸಹಾಯಕರು, ಕಚೇರಿ ಸಿಬ್ಬಂದಿಗಳು, ನವಜೀವನ ಸದಸ್ಯರು ಹಾಗೂ 75 ಮಂದಿ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.