ಪರಮ ಪೂಜ್ಯರು ಒಬ್ಬ ವ್ಯಕ್ತಿ ಜೀವನದಲ್ಲಿ ಅಭಿವೃದ್ದಿ ಆಗಲು, ಸ್ವಾವಲಂಬಿ ಜೀವನ ನಡೆಸಲು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ತಾನು ಅಲ್ಲದೆ ತನ್ನ ಕುಟುಂಬ ಅಭಿವೃದ್ದಿ ಆಗಲು, ಜೀವನದ ದಾರಿಯನ್ನು ಯಶಸ್ವೀಗೊಳಿಸಳು, ಮಕ್ಕಳಿಗೆ ಶಿಕ್ಷಣ, ಸಾಮಾಜಿಕ ಕೆಲಸ, ಪ್ರಗತಿನಿದಿ ಮೂಲಕ ಆರ್ಥಿಕ ಅಭಿವೃದ್ದಿ, ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಲು ಮದ್ಯವರ್ಜನ ಶಿಬಿರದ ಮೂಲಕ ವ್ಯಸನ ಮುಕ್ತರಾಗಲು ಅವಕಾಶ, ಕೆರೆ ಅಭಿವೃದ್ಧಿ, ಶಿಕ್ಷಣ ಕ್ರಾಂತಿ, ಸ್ವ ಸಹಾಯ ಸಂಘಗಳ ಮೂಲಕ ಜನರ ಎಳಿಗೆಗಾಗಿ ಹಗಲಿರುಳು ಶ್ರಮಿಸುತಿದ್ದು ಅವರ ಜೊತೆಗೆ ನಾವೆಲ್ಲರೂ ಈ ಪುಣ್ಯ ಕಾರ್ಯಕ್ಕೆ ಕೈ ಜೋಡಿಸಿ ಒಂದು ಹೊಸ ಕ್ರಾಂತಿ ಮೂಡಿಸುವ ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಉದ್ಯಮಿಗಳು ಸುಬ್ರಮಣ್ಯ, ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷರು ಶ್ರೀ ಸುರೇಶ್, ಸಮಿತಿಯ ಅಧ್ಯಕ್ಷರು ಮೋಹನ್ ಶೆಟ್ಟಿ, ಉಪಾಧ್ಯಕ್ಷರಾದ ಚಂದ್ರಶೇಕರ್, ಜಿಲ್ಲಾ ನಿರ್ದೇಶಕರು ಚಂದ್ರಶೇಕರ್ ಜೆ, ಜಿಲ್ಲಾ ವೇದಿಕೆಯ ಸದಸ್ಯರಾದ ನಾರಾಯಣ್ ಕಾಮತ್, ಶ್ರೀಮತಿ ಶಶಿಕಲಾ ಮಲ್ಲಪ, ಒಕ್ಕೂಟದ ಅಧ್ಯಕ್ಷ ಪದಾಧಿಕಾರಿಗಳು ಸ್ವ ಸಹಾಯ ಸಂಘದ ಪಾಲುದಾರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯಾಸ್ ಕುಟುಂಬದ ದಿನ ಕಾರ್ಯಕ್ರಮವನ್ನು ನಡೆಸಿಕೊಟ್ಟರು 65 ಮಂದಿ ಶಿಬಿರಾರ್ಥಿ ಬಂಧುಗಳು ದಂಪತಿ ಸಮೇತ ಬಾಗವಹಿಸಿ ಇದರ ಪ್ರಯೋಜನ ಪಡಕೊಂಡು ನವಜೀವನಕ್ಕೆ ಕಾಲಿಟ್ಟರು. ವಲಯ ಮೇಲ್ವಿಚಾರಕರು ಸ್ವಾಗತಿಸಿ,ತಾಲೂಕ್ ಯೋಜನಾಧಿಕಾರಿಗಳು ಧನ್ಯವಾದವನ್ನು ಮಾಡಿದರು. ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿಗಳು, ಶಿಬಿರಾಧಿಕಾರಿಗಳು, ಆರೋಗ್ಯ ಸಹಾಯಕರು ಕಾರ್ಯಕರ್ತರು, ನವಜೀವನ ಸದಸ್ಯರು ಉಪಸ್ಥಿತರಿದ್ದರು.
