203 ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಕುಟುಂಬ ದಿನ ಕಾರ್ಯಕ್ರಮ

Janajagurthi Vedike News

ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್ ಎಚ್ ಮಂಜುನಾಥ್ ಸರ್ ರವರು ಬೆಳಿಗ್ಗೆ ಇಂದು ಆಗಮಿಸಿ ಕುಟುಂಬ ಜೀವನದ ಪಾಠವನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಸಂಸ್ಕೃತಿ -ಸಂಸ್ಕಾರ ,ದೇವರು -ಪ್ರಾರ್ಥನೆ, ಕುಟುಂಬ- ಜೀವನ, ಗಂಡ -ಹೆಂಡತಿ, ಅಹಂಕಾರ- ಸದಾಚಾರ, ಪ್ರೀತಿ- ವಿಶ್ವಾಸ,ಸಾರ್ಥಕ ಬದುಕು. ಎಲ್ಲ ವಿಚಾರದಂತೆ ಅತ್ಯದ್ಭುತ ಸಂದೇಶವನ್ನು ಸುಮಾರು ಒಂದುವರೆ ಗಂಟೆಗಳ ಕಾಲ ಬೋಧಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು .ಅವರ ಬೋಧನೆಯು ಶಿಬಿರಾರ್ಥಿಗಳ ಮನತಟ್ಟುವಂತಿತ್ತು .ಎಲ್ಲರೂ ಅವರ ಮಾಹಿತಿಯಿಂದ ಬದುಕಿನ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸ ಹೊಂದಿದರು.