ಚಿತ್ರದುರ್ಗ ಪ್ರಾದೇಶಿಕ ವಿಭಾಗದ 4 ಜಿಲ್ಲಾ ವ್ಯಾಪ್ತಿಯ ಸ್ವಾಸ್ಥ್ಯ ಸಂಕಲ್ಪ ತರಬೇತುದಾರ ತರಬೇತಿ ಕಾರ್ಯಗಾರವನ್ನು ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ.ಬಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್ ಜನಜಾಗೃತಿ ವೇದಿಕೆಯ ಹುಟ್ಟು ಬೆಳವಣಿಗೆ, ಜನಜಾಗೃತಿ ಕಾರ್ಯಕ್ರಮ, ಮದ್ಯ ಮತ್ತು ಮಾದಕ ವಸ್ತುಗಳ ದೇಶದಲ್ಲಿ ಹಾವಳಿ, ಯುವ ಜನತೆಯ ಪರದಾಟ, ವಿದ್ಯಾರ್ಥಿ ಜೀವನ, ಭಯೋತ್ಪದನೆ, ನಕ್ಷಲಿಸಂ, ಅಪಘಾತ, ಆತ್ಮಹತ್ಯೆ, ಮೂಡನಂಬಿಕೆ, ತಪ್ಪುಗ್ರಹಿಕೆ, ಸಹವಾಸದೋಷ, ಒತ್ತಡ, ಮೋಜು, ಕುತೂಹಲ, ಸಂಸ್ಕಾರದ ಕೊರತೆ, ಕ್ಷಣಿಕ ಸುಖ, ಕ್ಷುಲ್ಲಖ ಕಾರಣ ಕ್ಷಣಿಕ ಸುಖ, ದುಷ್ಟ ಪದ್ಧತಿ, ದುಷ್ಟ ಚಟ, ಬರ್ಬರ ಖಾಯಿಲೆ, ಬೀಕರ ಸಮಸ್ಯೆ, ಪಂಚ ಮಹಾ ಖಾಯಿಲೆ, ಮಾದಕ ವಸ್ತುಗಳು ದುರುಪಯೋಗ, ಪ್ಯಾಶನ್, ವಂಶ ಪಾರಂಪರ್ಯತೆ, ಕೀಳು ಮನೋಭಾವನೆ, ನಿರಾಶೆ, ಬಡತನ, ನೀರುದ್ಯೋಗ, ದೈರ್ಯ ತರಲು ಮಾದಕ ವಸ್ತುಗಳನ್ನು ಬಳಸುವುದು ಜಾಸ್ತಿ, ಪ್ರಚೋದನಕಾರಕ ಉತ್ತೇಜಕ ಮಾದಕ ವಸ್ತುಗಳು, ಭ್ರಮಕಾರಕ, ಸಂಮೋಹಕ ಮತ್ತು ಮಂಕು ಗೊಳಿಸುವ ಪದಾರ್ಥಗಳು, ನೋವು ನಿವಾರಕ, ಮತಿ ವಿಕಾರಕ ಮಾದಕ ವಸ್ತುಗಳು ವ್ಯಾಪಕವಾಗಿ ಹರಡಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಮನಪರಿವರ್ತನೆಯ ತರಗತಿ ನೀಡುವುದರೊಂದಿಗೆ ಸಾಧ್ಯ, ಮಾದಕ ವಸ್ತುಗಳಲ್ಲಿ ಇರುವ ಹಾನಿಕಾರಕ ಪದಾರ್ಥಗಳು, ಮದ್ಯಪಾನದ ಬಗ್ಗೆ ತಿಳಿದುಕೊಳ್ಳಬೇಕಾದ ಸತ್ಯ, ಮದ್ಯಪಾನದಿಂದ ಶರೀರಕ್ಕೆ, ಕುಟುಂಬಕ್ಕೆ, ಸಮಾಜಕ್ಕೆ ಆಗುವ ದುಷ್ಪರಿಣಾಮಗಳು, ಆರೋಗ್ಯ ಮತ್ತು ಸುರಕ್ಷತೆ ಮತ್ತು ಮದ್ಯಪಾನಕ್ಕೆ ಪರಿಹಾರಗಳು ಇದರ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಾಗಾರದಲ್ಲಿ ಪ್ರಾದೇಶಿಕ ವ್ಯಾಪ್ತಿಯ 4 ಜಿಲ್ಲೆಯ 80ಮಂದಿ ತರಬೇತುದಾರರು, ಜಿಲ್ಲಾ ವೇದಿಕೆಯ ಅಧ್ಯಕ್ಷರುಗಳು, 4 ಜಿಲ್ಲಾ ವ್ಯಾಪ್ತಿಯ ಜಿಲ್ಲಾ ನಿರ್ದೇಶಕರು, ಪ್ರಾದೇಶಿಕ ಯೋಜನಾಧಿಕಾರಿಗಳು, ತಾಲೂಕ್ ಯೋಜನಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.ತರಬೇತುದಾರರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು
