ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ.ಸಿ.ಟ್ರಸ್ಟ್ ಹರಿಪುರ ತಾಲೂಕು ಅದೇ ರೀತಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇದರ ಸಹಯೋಗದೊಂದಿಗೆ 1663 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ಪಟ್ಟದ ಚಿನ್ಮಯ ಸ್ವಾಮಿ ಗಳು ನೆರವೇರಿಸಿದರು. ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾದ ದ್ವಾರಕೀಶ್, ಪೋಲಿಸ್ ಅಧಿಕಾರಿಗಳಾದ ಶ್ರೀ ಹಾಲಮೂರ್ತಿ ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ನಾಗರಾಜ್ , ತಾಲೂಕು ಯೋಜನಾಧಿಕಾರಿ ಶಾಂತರಾಮ್ ಯೋಜನೆಯ ಎಲ್ಲಾ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
