ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರಧ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ) ತರೀಕೆರೆˌ ಜಿಲ್ಲಾ ಜನಜಾಗ್ರತಿ ವೇದಿಕೆ ಚಿಕ್ಕಮಗಳೂರುˌ ಎಸ್ ಜೆ ಎಮ್ ಪ್ರಥಮ ದರ್ಜೆ ಮಹಾವಿದ್ಶಾಲಯ ತರೀಕೆರೆ ಇದರ N S S ಘಟಕ ಮತ್ತು ˌಯುವ ರೆಡ್ ಕ್ರಾಸ್ ಘಟಕ ಇವರ ಜಂಟಿ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರಧ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ) ತರೀಕೆರೆˌ ಜಿಲ್ಲಾ ಜನಜಾಗ್ರತಿ ವೇದಿಕೆ ಚಿಕ್ಕಮಗಳೂರುˌ ಎಸ್ ಜೆ ಎಮ್ ಪ್ರಥಮ ದರ್ಜೆ ಮಹಾವಿದ್ಶಾಲಯ ತರೀಕೆರೆ ಇದರ N S S ಘಟಕ ಮತ್ತು ˌಯುವ ರೆಡ್ ಕ್ರಾಸ್ ಘಟಕ ಇವರ ಜಂಟಿ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಕಾರ್ಯಕ್ರಮ ಆಯೋಜಿಸಲಾಯಿತು .
ಸಂಪನ್ಮೂಲ ವ್ಶಕ್ತಿಯಾಗಿ ಖ್ಶಾತ ವೈದ್ಶರಾದ ಡಾ. ಎಸ್ ಎನ್ ಆಚಾರ್ಯ ಇವರು ಯುವಪೀಳಿಗೆಯ ಮೇಲೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ ಕೆ ಜಿ ಚವಾಣ ಇವರು ಅಧ್ಶಕ್ಷತೆ ವಹಿಸಿ ಮಾದಕವಸ್ತುಗಳಿಗೆ ವಿಧ್ಶಾರ್ಥಿಗಳು ಬಲಿಯಾಗದಂತೆ ಕರೆ ನೀಡಿದರು. ಸ್ಥಳೀಯ ಯೋಜನಾಧಿಕಾರಿಯವರು ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಧ್ಶೇಯೋಧ್ಧೇಶಗಳ ಬಗ್ಗೆ ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ರಘು ಹಾಗೂ ಯುವ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಸದಾಶಿವಯ್ಶ ಎ ಇವರು ಕಾರ್ಯಕ್ರಮದ ಕುರಿತಾಗಿ ಅನಿಸಿಕೆ ವ್ಶಕ್ತಪಡಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ನಂದಿನಿ ಕಾರ್ಯಕ್ರಮ ನಿರೂಪಿಸಿದರು. ಜೆ ರಘು ಇವರು ಸ್ವಾಗತಿಸಿ ವಲಯ ಮೇಲ್ವಿಚಾರಕರಾದ ಹೋಮ್ಶ ನಾಯ್ಕ ವಂದಿಸಿದರು ಸ್ಥಳೀಯ ಸೇವಾಪ್ರತಿನಿಧಿ ಪುಷ್ಪಾವತಿ ಮತ್ತು ಕಾಲೇಜಿನ ಉಪನ್ಶಾಸಕರು ವಿಧ್ಶಾರ್ಥಿಗಳು ಉಪಸ್ಥಿತರಿದ್ದರು.