ಚಿತ್ರದುರ್ಗ ಜಿಲ್ಲಾ ಜನಜಾಗೃತಿ ವೇದಿಕೆಯ 2023 24ನೇ ಸಾಲಿನ ಪ್ರಥಮ ದಿನದ ವೇದಿಕೆ ಸಭೆ

Janajagurthi Vedike News

ಚಿತ್ರದುರ್ಗ ಜಿಲ್ಲಾ ಜನಜಾಗೃತಿ ವೇದಿಕೆಯ 2023 24ನೇ ಸಾಲಿನ ಪ್ರಥಮ ದಿನದ ವೇದಿಕೆ ಸಭೆಯು ಸಿರಿಗೆರೆ ಯೋಜನಾ ಕಚೇರಿಯಲ್ಲಿ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಮಾರುತೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿಗಳು ಗತ ಸಭೆಯ ವರದಿಯನ್ನು ಮಂಡಿಸಿದರು. 2022-2 3ನೇ ಸಾಲಿನ ತಾಲೂಕ್ ವಾರು ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಯೋಜನಾಧಿಕಾರಿಗಳು ಮಂಡಿಸಿದರು. 2023 24 ರ ಕ್ರಿಯಾಯೋಜನೆಯಲ್ಲಿ ಜಿಲ್ಲಾ ವೇದಿಕೆಯ ಮೂಲಕ ಅನುಷ್ಠಾನ ಮಾಡಬೇಕಾದ ಕಾರ್ಯಕ್ರಮಗಳಾದ ಮದ್ಯವರ್ಜನ ಶಿಬಿರ, ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ, ತಂಬಾಕು ವಿರೋಧಿ ದಿನ, ವಿಶ್ವ ಮಾದಕ ವಸ್ತು ವಿರೋಧಿ ದಿನ, ನವಜೀವನ ಸಮಾವೇಶ,ಪೋಷಕರ ಆಯ್ಕೆ, ಸ್ವಾಸ್ತ್ಯ ಸಂಕಲ್ಪ ತರಬೇತುದಾರರ ತರಬೇತಿ, ಗಾಂಧಿ ಜಯಂತಿ ಕಾರ್ಯಕ್ರಮ, ಸುತ್ತೋಲೆ ಪ್ರಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಮರುತೇಶ್ ರವರು 2 ವರ್ಷಗಳಿಂದ ಜಿಲ್ಲಾ ವೇದಿಕೆಯ ಅದ್ಯಕ್ಷರಾಗಿ ಜವಾಬ್ದಾರಿ ನಿರ್ವಹಣೆ ಮಾಡಿದ್ದು 2 ವರ್ಷ ಪೂರ್ತಿಯಾಗಿದ್ದು ಪದಾಧಿಕಾರಿಗಳ ಬದಲಾವಣೆ ಮಾಡಲಾಯ್ತು. ನೂತನವಾಗಿ ಅದ್ಯಕ್ಷರಾಗಿ ಹೊಸದುರ್ಗದ ಶ್ರೀ ಓಂಕಾರಪ್ಪ ಮತ್ತು ಉಪಾಧ್ಯಕ್ಷರಾಗಿ ಚಿತ್ರದುರ್ಗದ ಮಂಜುನಾಥರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪದಗ್ರಹಣ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು.
ಜಿಲ್ಲಾ ವೇದಿಕೆಯ ಪದಾಧಿಕಾರಿಗಳು, ಚಿತ್ರದುರ್ಗ ಮತ್ತು ಹಿರಿಯರು ಜಿಲ್ಲೆಯ ನಿರ್ದೇಶಕರು,ತಾಲೂಕು ಯೋಜನಾಧಿಕಾರಿಗಳು, ಪ್ರಾದೇಶಿಕ ಯೋಜನಾಧಿಕಾರಿಗಳು, ಜಿಲ್ಲಾ ಪ್ರಬಂದಕರು ಉಪಸ್ಥಿತರಿದ್ದರು.