ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ತಾಲೂಕು ಜನಜಾಗೃತಿ ವೇದಿಕೆ ರಚನೆ

Janajagurthi Vedike News

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ತಾಲೂಕು ಜನಜಾಗೃತಿ ವೇದಿಕೆಯನ್ನ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಸವಣೂರು ವಲಯದ ಜನಜಾಗೃತಿ ವಲಯದ ಅಧ್ಯಕ್ಷರಾದ, ವೃತ್ತಿಯಲ್ಲಿ ವಕೀಲರಾದಂತಹ ಶ್ರೀ ಮಹೇಶ್ ರವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀ ಸೀತಾರಾಮ್ ಪೊಸವಳಿಕೆ ಅವರು ಆಯ್ಕೆಯಾಗಿರುತ್ತಾರೆ. ಇದೇ ಸಂದರ್ಭದಲ್ಲಿ ಕಡಬ ತಾಲೂಕಿನ 6 ವಲಯದ 30 ಮಂದಿ ನಾಮ ನಿರ್ದೇಶಕ ಸದಸ್ಯರ ಪಟ್ಟಿಯನ್ನು ಅಂತಿಮ ಗೊಳಿಸಲಾಯಿತು. ನೂತನ ಅಧ್ಯಕ್ಷರಿಗೆ ಪದಾಧಿಕಾರಿಗಳಿಗೆ ತಾಲೂಕು ವೇದಿಕೆ ಬೈಲಾ ವನ್ನು ವಿವರಿಸಿ ಹೇಳಲಾಯಿತು. 2023 -24ನೇ ಸಾಲಿನಕ್ರಿಯಾ ಯೋಜನೆಯ ಬಗ್ಗೆಯೂ ಚರ್ಚಿಸಲಾಯಿತು. ಪೂಜ್ಯರ ಮತ್ತು ಮಾನ್ಯ ಕಾರ್ಯ ನಿರ್ವಾಹಕ ನಿರ್ದೇಶಕರ ಆದೇಶದಂತೆ ಜನಜಾಗ್ರುತಿ ಪದಾಧಿಕಾರಿಗಳಿಗೆ ನೀಡಲ್ಪಡುವ ಸಂಪೂರ್ಣ ಸುರಕ್ಷದ ಕುರಿತಾಗಿಯೂ ತಿಳಿಸಲಾಯಿತು. ಜನಜಾಗಾತಿ ಪದಾಧಿಕಾರಿಗಳು ಸಂಪೂರ್ಣ ಸುರಕ್ಷ ನೀಡಿದ ಪೂಜ್ಯರಿಗೆ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಪುತ್ತೂರು ತಾಲೂಕ ಅಧ್ಯಕ್ಷರು ನಿರ್ಣಯ ಪುಸ್ತಕವನ್ನು ಹಸ್ತಾಂತರಿಸಿದರು.