ಬಾಗಲಕೋಟೆ ಜಿಲ್ಲೆ ಬಿಳಗಿ ತಾಲೂಕಿನಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಭಜನಾ ಮಂಗಳೋತ್ಸವ ಹಾಗೂ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಬಾಗಲಕೋಟೆ ಜಿಲ್ಲೆ ಬಿಳಗಿ ತಾಲೂಕಿನಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಭಜನಾ ಮಂಗಳೋತ್ಸವ ಹಾಗೂ ನವಜೀವನೋತ್ಸವ ಕಾರ್ಯಕ್ರಮವು ಬಿಳಗಿ ಪಟ್ಟಣದ ಕಲ್ಮಠ ದೇವಸ್ಥಾನದ ಆವರಣದಲ್ಲಿ ನಡೆಯಿತು. ಬಾಗಲಕೋಟೆ ಜಿಲ್ಲೆಯ ನಿರ್ದೇಶಕರಾದ ಶ್ರೀಯುತ ವಿಠ್ಠಲ್ ಸಾಲಿಯಾನ್ ಸರ್ ರವರು ದೀಪ ಉದ್ದೀಪನ ಮಾಡುವ ಮೂಲಕ ಭಜನಾ ಮಂಗಳೋತ್ಸವಕ್ಕೆ ಚಾಲನೆ ನೀಡಿದರು. ಕುಣಿತ ಭಜನೆ ಸಂಪನ್ನಗೊಂಡ ನಂತರ ಶ್ರೀ ಮಂಜುನಾಥ ಸ್ವಾಮಿಗೆ ನವ ಜೀವನ ಸದಸ್ಯರು ಹಾಗೂ ಅವರ ಕುಟುಂಬಸ್ಥರು ಹಣತೆ ಆರತಿ ಮಾಡಿ ಮಹಾಮಂಗಳಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿನ್ಸಂಟ್ ಪಾಯಸ್ ಸರ್ ರವರು ಮಾತನಾಡಿ ನವ ಜೀವನ ಸದಸ್ಯರ ಪಾನಮುಕ್ತ ಬದುಕಿಗೆ ಶುಭ ಹಾರೈಸಿ ವಿಶಿಷ್ಟವಾದ ಮಾಹಿತಿ ಮಾರ್ಗದರ್ಶನದ ಜೊತೆಗೆ ನವ ಜೀವನ ಸಮಿತಿಗಳ ಬಲವರ್ಧನೆ, ಮದ್ಯವರ್ಜನ ಶಿಬಿರಗಳ ಮಹತ್ವ, ಭಜನೆಯ ಹಾಗೂ ಇತರ ವಿಚಾರಗಳ ಕುರಿತು ತಿಳಿಸಿದರು