ಚೆನ್ನಾರಾಯ ಪಟ್ಟಣದ ಗಣಪತಿ ಪೆಂಡಾಲ್ ಸಮುಚ್ಚಯದ. ಸಭಾಭವನದಲ್ಲಿ ಚೆನ್ನರಾಯ ಪಟ್ಟಣ ಮತ್ತು ಶ್ರವಣ ಬೆಳಗೊಳ ತಾಲೂಕಿನಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಿ ಪಾನಮುಕ್ತ ಜೀವನ ನಡೆಸುತ್ತಿರುವ ನವ ಜೀವನ ಸಮಿತಿ ಸದಸ್ಯರಿಗೆ ನವಜೀವನೋತ್ಸವ ಕಾರ್ಯಕ್ರಮ ನಡೆಸಲಾಯಿತು.ಉದ್ಘಾಟನೆ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾದೇಶಿಕ ನಿರ್ದೇಶಕರಾದ ಬಿ ಜಯರಾಮ ನೆಲ್ಲಿತ್ತಾಯ ರವರು ಉದ್ಘಾಟಿಸಿ.. ನವಜೀವನವೆಂಬುದು ದೇವರು ಕೊಟ್ಟ ವರಪ್ರಸಾದ ಇದನ್ನು ಇದನ್ನು ನಮ್ಮ ನವ ಜೀವನ ಸದಸ್ಯರು ಅರಿತು ಕೊಂಡು ಜೀವನ ಪರಿಯಂತ ವ್ಯಸನ ಮುಕ್ತ ಜೀವನವನ್ನು ನಡೆಸಿದಾಗ ಪೂಜ್ಯರು ಕಂಡ ಕನಸು ನನಸಾಗಲು ಸಾಧ್ಯ ಎಂದರಲ್ಲದೆ ಬದುಕಿಗೆ ಪೂರಕವಾದ ನಿದರ್ಶನಗಳನ್ನು ಒಳಗೊಂಡ ಮಾರ್ಗದರ್ಶನ ನೀಡಿದರು.ಭಾವುಕರಾದ ನವಜೀವನ ಸದಸ್ಯರು ಅನಿಸಿಕೆಯನ್ನು ವ್ಯಕ್ತಪಡಿಸಿ ಕುಡಿತದ ಜೀವನ ಮತ್ತು ಪ್ರಸ್ತುತ ನಡೆಸುತ್ತಿರುವ ಜೀವನವನ್ನು , ಮಾಡಿದ ಸಾಧನೆ, ಸಿಗುತ್ತಿರುವ ಗೌರವ ನೆನೆದು ಈ ಜೀವನ ಬರಲು ಶ್ರಮವಹಿಸಿ ದುಡಿದ ಯೋಜನೆಯ ಕಾರ್ಯಕರ್ತರು & ಸಮಿತಿಯ ಪದಾಧಿಕಾರಿಗಳ ಸೇವೆಯನ್ನು ನೆನೆದು ಕೃತಜ್ಞತಾಪೂರ್ವಕವಾದ ಧನ್ಯವಾದಗಳು ನೀಡಿ, ಶಿಬಿರದ ಕಾರ್ಯಕ್ರಮವನ್ನು ದಯಪಾಲಿಸಿದ ಯೋಜನೆ, ಜನಜಾಗೃತಿ ವೇದಿಕೆಗೆ ಮತ್ತು ಪೂಜ್ಯ ದಂಪತಿಗಳಿಗೆ ಚಿರಋಣಿಗಳೆಂದರು.ಪ್ರಮಾಣ ಪತ್ರ ವಿತರಣೆ ಮತ್ತು ಅಭಿನಂದನೆ ಶಿಬಿರದ ಸಂದರ್ಭದಲ್ಲಿ ಸಹಕಾರ ನೀಡಿದ ನವ ಜೀವನ ಬಂದು ಗಳಿಗೆ ಗೌರವ ಅರ್ಪಣೆ ಮಾಡಲಾಯಿತು ಈ ದಿನ ಪ್ರಮಾಣ ಪತ್ರ ವಿತರಿಸುವುದರ ಜೊತೆಗೆ ಶಾಲು ಹಾಕಿ ಗುಲಾಬಿ ಹೂ ನೀಡಿ ನವಜೀವನ ಸದಸ್ಯರನ್ನು ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಜಯರಾಮ್ ತೋಟಿ,ಜನಜಾಗ್ರತಿ ವೇದಿಕೆ ಸದಸ್ಯರಾದ ಶ್ರೀ ಉಮೇಶ್, ಜಿಲ್ಲಾ ನಿರ್ದೇಶಕರು ಶ್ರೀ ಮಹಾಬಲ ಕುಲಾಲ್, ಕ್ಷೆತ್ರ ಯೋಜನಾಧಿಕಾರಿಗಳು ಶ್ರೀ ಪ್ರಸಾದ್, ಶ್ರೀ ಸದಾಶಿವ ಜನಜಾಗ್ರತಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಶ್ರೀ ಭಾಸ್ಕರ್ ಸರ್ ಉಪಸ್ಥಿತರಿದ್ದರು. ಪಾನ ಮುಕ್ತ ನವಜೀವನ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಈ ಸಂದರ್ಭದಲ್ಲಿ ಈ ಹಿಂದೆ ಮದ್ಯ ವರ್ಜನ ಶಿಬಿರದಲ್ಲಿ ಭಾಗವಹಿಸಿ ಪಾನಮುಕ್ತ ಜೀವನ ನಡೆಸುತ್ತಿರುವವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಪೂರಕರಾದವರು* ಶಿಬಿರ ನಡೆಸಿದ ವಲಯದ ಮೇಲ್ವಿಚಾರಕರು, ನವಜೀವನ ಸದಸ್ಯರು ಮತ್ತು ಅವರ ಮನೆಯವರು, ನವಜೀವನದ ಪೋಷಕರು ಉಪಸ್ಥಿತರಿದ್ದರು.ಪಾನ ಮುಕ್ತ ಜೀವನ ಮಾಡುತ್ತಿರುವವರನ್ನು ಪ್ರಮಾಣ ಪತ್ರ ನೀಡಿ ಪ್ರೇರಣೆಯ ಪ್ರೋತ್ಸಾಹದ ಮಾತಿನ ಮೂಲಕ ಹುರಿದುಂಬಿಸಲಾಯಿತು.
