ಅರಸೀಕೆರೆ ಪಟ್ಟಣದ ಭೋವಿ ಸಮುದಾಯ ಭವನದಲ್ಲಿ ಬಾಣಾವರ ಮತ್ತು ಅರಸಿಕೆರೆ ತಾಲೂಕಿನಲ್ಲಿ ವ್ಯಸನ ಮುಕ್ತರಾದ ನವಜೀವನ ಸಮಿತಿಯ ಸದಸ್ಯರ ನವಜೀವನೋತ್ಸವ & ಅಭಿನಂದನ ಕಾರ್ಯಕ್ರಮವನ್ನು ನಡೆಸಲಾಯಿತು.ಉದ್ಘಾಟನೆ ಅರಸಿಕೆರೆಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ಚಂದ್ರಶೇಖರ್ರವರು ನೆರವೇರಿಸಿ ಧರ್ಮಸ್ಥಳದ ವತಿಯಿಂದ ನಡೆಸಲ್ಪಡುವ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಕಾರ್ಯಕ್ರಮ ನಿಜವಾಗಿಯೂ ವ್ಯಕ್ತಿಯ ವ್ಯಕ್ತಿತ್ವವನ್ನು ವ್ಯಸನಿಗೆ ಮನವರಿಕೆ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರಳಾಗುತ್ತಿದೆ, ಪೋಲಿಸ್ ಇಲಾಖೆಗೆ ಬರುವ ಹೆಚ್ಚಿನ ಎಲ್ಲಾ ಅಪರಾಧ ಪ್ರಕರಣಗಳಲ್ಲಿ ಮದ್ಯಪಾನ& ಮಾದಕ ವಸ್ತುಗಳ ಪಾಲು ಬಹಳ ದೊಡ್ಡದಾಗಿದೆ ಈ ಹಿನ್ನೆಲೆಯಲ್ಲಿ ಮಧ್ಯವಜ್ಜನ ಶಿಬಿರದಲ್ಲಿ ವ್ಯಸನ ಮುಕ್ತರಾದ ಎಲ್ಲಾ ನವಜೀವನ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು ಹಾಗೂ ಯೋಜನೆ ಮತ್ತು ಜನಜಾಗೃತಿ ವೇದಿಕೆ ಮತ್ತು ಉತ್ತಮ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿ ಪೂಜ್ಯರ ಸಮಾಜಮುಖಿ ಯೋಚನೆಯನ್ನು ಬಣ್ಣಿಸಲು ವಾಕ್ಯಗಳು ಇಲ್ಲ ಎಂದರು. ಸಾಧಕ ನವ ಜೀವನ ಸಮಿತಿಯ ಸದಸ್ಯರ ಅಭಿನಂದನೆ ಕಾರ್ಯಕ್ರಮದಲ್ಲಿ ಬಾಣವರ ಮತ್ತು ಅರಸಿಕೆರೆಯ ಮೂರು ಮಂದಿ ಸಾಧಕ ನವ ಜೀವನ ಸಮಿತಿಯ ಸದಸ್ಯರನ್ನು ಶಾಲು ಹಾರ ಮತ್ತು ಉಡುಗೊರೆಯನ್ನು ನೀಡಿ ವೇದಿಕೆಯಲ್ಲಿದ್ದ ಅತಿಥಿಗಳು ಅಭಿನಂದಿಸಿದರು. ಆಶಯ ನುಡಿ ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಬಿ ಜಯರಾಮ ನೆಲ್ಲಿತ್ತಾಯ ರವರು
ಮಧ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ಎಲ್ಲರೂ ರಾಗದಿದ್ದರೂ ಪರವಾಗಿಲ್ಲ… ಒಂದು ಶಿಬಿರದಲ್ಲಿ 10 ಮಂದಿ ಮುಕ್ತರಾದರು ಆ ಶಿಬಿರ ಯಶಸ್ವಿ ಮತ್ತು ಅವರನ್ನು ನಂಬಿದ ಕನಿಷ್ಠ 500 ಮಂದಿ ನಡೆಸುತ್ತಾರೆ ಇವತ್ತು ಅಂತಹ ವ್ಯಕ್ತಿಗಳನ್ನ ಯಾರು ಗುರುತಿಸಿ ಅಭಿನಂದಿಸುವುದಿಲ್ಲ , ಆ ಕೆಲಸವನ್ನು ಯೋಜನೆ ಮತ್ತು ಜನಜಾಗೃತಿ ವೇದಿಕೆ ಮಾಡುತ್ತಿದೆ
ಎಂದು ತಿಳಿಸಿ ,ಸಾಧನೆ ಮಾಡಿದ ನವಜೀವನ ಸದಸ್ಯರು ನಿಜವಾಗಿಯೂ ಸಾಧನೆಗೆ ಅರ್ಹರು ಎಂದರು. ವೇದಿಕೆಯಲ್ಲಿದ್ದ ಗಣ್ಯರು ಬೋವಿ ಸಮಾಜದ ತಾಲೂಕ ಅಧ್ಯಕ್ಷರಾದ ವೆಂಕಟೇಶ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗೇಶ್, ಜನಜಾಗೃತಿ ವೇದಿಕೆಯ ಸದಸ್ಯರಾದ ಮಹೇಶ್ ಬಂದೂರು, ಗಣೇಶ್ ಮೂರ್ತಿ, ಕೇಶವ ಪ್ರಸಾದ್, ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಹರೀಶ್ ರಾವ್ ಸಂದರ್ಭಕ್ಕೆ ಅನುಗುಣವಾಗಿ ಮಾತನಾಡಿ ಶುಭ ಹಾರೈಸಿದರು. ನವಜೀವನ ಸಮಿತಿಯ ಸದಸ್ಯರಿಂದಲೇ ಕಾರ್ಯಕ್ರಮಕ್ಕೆ ಸಹಕಾರ ಈ ಕಾರ್ಯಕ್ರಮ ಪಡೆಯಲು ತಾಲೂಕಿನ ಸಾಧನೆ ಮಾಡಿದ ನವ ಜೀವನ ಸಮಿತಿ ಸದಸ್ಯರು ಸಹಕಾರವನ್ನು ನೀಡಿ ವ್ಯವಸ್ಥೆಯ ಜೊತೆಗೆ ಸ್ಪಂದಿಸಿದರು.ತಾಲೂಕಿನಲ್ಲಿ ಮನೆ ಭೇಟಿ ಮತ್ತು ಸರ್ವೇಕ್ಷಣ ಉಭಯ ತಾಲೂಕುಗಳಲ್ಲಿ ಜನಜಾಗೃತಿ ವೇದಿಕೆಯ ಶಿಬಿರ ಅಧಿಕಾರಿ ಕುಮಾರ್ & ಶ್ರೀಮತಿ ಪ್ರಸಿಲ್ಲ ಮನ ಭೇಟಿ ನಡೆಸಿ ಸರ್ವೇಕ್ಷಣೆ ಮಾಡಿ ಕಾರ್ಯಕ್ರಮಕ್ಕೆ ಪೂರಕ ರೀತಿಯಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಯಕ್ರಮದ ಯಶಸ್ವಿಗೆ ಅರಸಿಕೆರೆ ತಾಲೂಕಿನ ಯೋಜನಾಧಿಕಾರಿಗಳಾದ ಬಾಣಾವರ ತಾಲೂಕಿನ ಯೋಜನಾಧಿಕಾರಿ ಜಯಂತ ಪೂಜಾರಿ ಸ್ವಾಗತಿಸಿ, ಅರಸೀಕೆರೆ ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಅಕ್ಷತರಯ್ಯ ಅವರು ವಂದಿಸಿದರು, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಮೇಲ್ವಿಚಾರಕರು ನವಜೀವನ ಪೋಷಕರು, ನವ ಜೀವನ ಸದಸ್ಯರು ಮತ್ತು ಅವರ ಮನೆಯವರು ಉಪಸ್ಥರಿದ್ದು ಯಶಸ್ಸಿಗೆ ಕಾರಣಕರ್ತರಾದರು.ಬ್ಯಾಡ್ಜ್ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ನವಜೀವನ ಸದಸ್ಯರಿಗೆ ಬ್ಯಾಡ್ಜ್ ನೀಡಿ ಶಾಲು ಹಾಕಿ ಅಭಿನಂದಿಸಲಾಯಿತು.ಉಪಹಾರದ ವ್ಯವಸ್ಥೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಸಾರ್ವಜನಿಕರಿಗೆ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಹಿರಿಯ ಮತ್ತು ಸಾಧಕ ನವ ಜೀವನ ಸಮಿತಿಯ ಸದಸ್ಯರೇ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿದ್ದು ಗಮನಹವಾಗಿತ್ತು.ತಾಲೂಕು ಮಟ್ಟದ ನವಜೀವನ ಸಮಿತಿ ರಚನೆ ಎರಡು ತಾಲೂಕಿನ ನವಜೀವನ ಸಮಿತಿಯ ಸದಸ್ಯರನ್ನೊಳಗೊಂಡು ತಾಲೂಕು ಮಟ್ಟದ ನವಜೀವನ ಸಮಿತಿಯ ಮುಂದಾಲತ್ವವೇ ಕಾರ್ಯಕ್ರಮ ಯಶಸ್ವಿಗೆ ಕಾರಣವಾಯಿತು ಮತ್ತು ಮುಂದಕ್ಕೆ ತಿಂಗಳ ಮಾಸಿಕ ಸಭೆ ಹಾಗೂ ಮಧ್ಯವರ್ಜನ ಶಿಬಿರ ಯಶಸ್ಸಿಗೆ ಅಡಿಪಾಯ ಹಾಕಿದಂತಾಯಿತು.
