ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ನವಜೀವನ ಸದಸ್ಯರ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ನವಜೀವನೋತ್ಸವ ಕಾರ್ಯಕ್ರಮವು ಈ ದಿನ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಭಿನವ ಒಪ್ಪತ್ತೇಶ್ವರ ಮಹಾ ಸ್ವಾಮಿಗಳು ಸಂಸ್ಥಾನ ಮಠ ಕರಮುಡಿ( ಗುಳೇದಗುಡ್ಡ) ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಎಸ್. ಬಿ. ಅಸೂಟಿ ಸರ್ ರವರು ವಹಿಸಿದ್ದರು. ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿನ್ಸಂಟ್ ಪಾಯಸ್ ಸರ್ ರವರು ನೆರವೇರಿಸಿ ನವಜೀವನ ಸದಸ್ಯರಿಗೆ ಹಾಗೂ ಕುಟುಂಬಸ್ಥರಿಗೆ ಉತ್ಸಾಹ ತುಂಬುವ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.ಸಾಧಕ ನವಜೀವನ ಸದಸ್ಯರಾದ ಶರಣಪ್ಪ ಭಜಂತ್ರಿ ತಮ್ಮ ಪಾನಮುಕ್ತ ಜೀವನದ ಅನುಭವ ಹಂಚಿಕೊಂಡು ಕುಡಿತದ ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನೆದು ಕಣ್ಣೀರಿಟ್ಟರು. ನಂತರ ಗದಗ ಜಿಲ್ಲೆಯ ಹಿರಿಯ ಸದಸ್ಯರಿಗೆ ಪಾನಮುಕ್ತ ಜೀವನ ನಡೆಸಿತ್ತಿರುವುದಕ್ಕಾಗಿ ಪ್ರಮಾಣ ಪತ್ರ ವಿತರಣೆ ಮಾಡಿ ಸದಸ್ಯರ ಪಾನಮುಕ್ತ ಬದುಕಿಗೆ ಶುಭ ಹಾರೈಸಿದರು