ಬೆಂಗಳೂರು ಪ್ರಾದೇಶಿಕ ವಿಭಾಗದ ಕೋಲಾರ ಜಿಲ್ಲಾ ಜನ ಜಾಗೃತಿ ವೇದಿಕೆಯ ಸಭೆ

Janajagurthi Vedike News

ಬೆಂಗಳೂರು ಪ್ರಾದೇಶಿಕ ವಿಭಾಗದ ಕೋಲಾರ ಜಿಲ್ಲಾ ಜನ ಜಾಗೃತಿ ವೇದಿಕೆಯ ಸಭೆಯನ್ನು ಪತ್ರಕರ್ತರ ಭವನದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ವಾಸುದೇವ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರು ಶ್ರೀ ಲಕ್ಷ್ಮಣಗೌಡರವರು ಉಪಾಧ್ಯಕ್ಷರು ಶ್ರೀ ವೆಂಕಟೇಶ್ ರವರು ವಿಜಯ್ ಕುಮಾರ್ ರವರು ಭಾಗವಹಿಸಿದ್ದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಗತ ಸಭೆಯ ವರದಿಯೊಂದಿಗೆ ಕಾರ್ಯಕ್ರಮದ ನಿರ್ವಹಣೆಯನ್ನು ಕಾರ್ಯದರ್ಶಿಗಳಾದ ಶ್ರೀ ಮರಳಿದರ ಶೆಟ್ಟಿ ಅವರು ನೆರವೇರಿಸಿದರು. 2023- 24ನೇ ಕ್ರಿಯಾ ಯೋಜನೆಯ ಬಗ್ಗೆ ಪ್ರಾದೇಶಿಕ ಜನ ಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ರವರು ವಿವರಿಸಿದರು. ಕ್ರಿಯಾಯೋಜನೆಯ ಅನುಷ್ಠಾನದ ಬಗ್ಗೆ ಸೂಕ್ತ ನಿರ್ಣಯ ಸಭೆಯಲ್ಲಿ ಕೈಗೊಳ್ಳಲಾಯಿತು. ಮುಂದಿನ ಮದ್ಯ ವರ್ಜನ ಶಿಬಿರದ ಬಗ್ಗೆ ತಾಲೂಕಿನಲ್ಲಿ ಎರಡು ನವಜೀವನೋತ್ಸವ ಕಾರ್ಯಕ್ರಮ ನಡೆಸುವುದರ ಬಗ್ಗೆ, ಜಿಲ್ಲೆಯಲ್ಲಿ ಒಟ್ಟು 54 ವಲಯಗಳಿದ್ದು ಪ್ರತಿ ವಲಯಕ್ಕೊಂದು ನವ ಜೀವನ ಸಮಿತಿ ರಚನೆಯ ಬಗ್ಗೆ, ತಾಲೂಕಿನಲ್ಲಿ 10 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸುವುದರ ಬಗ್ಗೆ, ವಿಶ್ವ ತಂಬಾಕು ವಿರೋಧಿ ದಿನಾಚರಣೆ, ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಆಚರಣೆ ಬಗ್ಗೆ, ಯೋಜನೆಯಿಂದ ಜನಜಾಗೃತಿ ವೇದಿಕೆಗೆ ತಾಲೂಕು ಒಂದಕ್ಕೆ 75,000 ಅನುದಾನಗಳ ಬಗ್ಗೆ ಚರ್ಚಿಸಲಾಯಿತು. ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು. ಯೋಜನಾಧಿಕಾರಿ ಸಿದ್ದಗಂಗಯ್ಯ ರವರು ಸ್ವಾಗತಿಸಿದರು. ಶ್ರೀ ಸುರೇಶ್ ರವರು ವಂದಿಸಿದರು. ಜಿಲ್ಲೆಯ ಜನಜಾಗೃತಿ ಸದಸ್ಯರು ಹಾಗೂ ಯೋಜನಾಧಿಕಾರಿಗಳು, ಜಿಲ್ಲಾ ಪ್ರಬಂಧಕರು ಉಪಸ್ಥಿತರಿದ್ದರು.