ತುಮಕೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಂಗಳೂರು ಪ್ರಾದೇಶಿಕ ವಿಭಾಗ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ತುಮಕೂರು ಜಿಲ್ಲೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ತುಮಕೂರು ಇದರ ಸಂಯುಕ್ತ ಆಶ್ರಯದಲ್ಲಿ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಪಾನಮುಕ್ತರಾದ ನವ ಜೀವನ ಸಮಿತಿ ಸದಸ್ಯರಿಗೆ ವಿಶೇಷವಾಗಿ ಆರು ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಗಾರವು Rseti ಯ ನಿರ್ದೇಶಕರಾದ ಶ್ರೀ ಅರುಣ್ ಕುಮಾರ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ತರಬೇತಿ ಕಾರ್ಯಗಾರದ ಉದ್ಘಾಟನೆಯನ್ನು ಸಾಯಿ ಅಚ್ಚುತ ಹೌಸಿಂಗ್ ತುಮಕೂರು ಇದರ ಸಂಸ್ಥಾಪಕರಾದ ಶ್ರೀ ಡಾ.ಚಂದ್ರಶೇಖರ್ ರವರು ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಜನಜಾಗೃತಿ ವೇದಿಕೆಯ ತುಮಕೂರು ಎರಡು ಇದರ ಸದಸ್ಯರಾದ ಶ್ರೀಮತಿ ಜಯಪ್ರಭಾ ರವರು ಭಾಗವಹಿಸಿದ್ದರು. ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಶ್ರೀ ಗಣೇಶ್ ಆಚಾರ್ಯ ರವರು ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆ ಯೊಂದಿಗೆ ಎಲ್ಲರನ್ನ ಸ್ವಾಗತಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಸಂಸ್ಥೆಯ ಉಪನ್ಯಾಸಕಿಯಾದ ಶ್ರೀಮತಿ ರಮ್ಯಾ ರವರು ನೆರವೇರಿಸಿದರು. ಜನ ಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ಶ್ರೀ ದರ್ಶನ್ ರವರು ವಂದಿಸಿದರು. ಉಪನ್ಯಾಸಕರಾದ ಪ್ರದೀಪ್ ರವರು ರವರು, ಶ್ರೀಮತಿ ಮಂಜುನಾಥ್ ಚಂದ್ರಶೇಖರ್ ಅವರುಉಪಸ್ಥಿತರಿದ್ದರು. ತರಬೇತಿ ಕಾರ್ಯಗಾರದಲ್ಲಿ ಒಟ್ಟು 26 ಜನ ನವಜೀವನ ಸಮಿತಿ ಸದಸ್ಯರು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.
