ಗದಗ ಜಿಲ್ಲೆಯ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆಯು ಈ ದಿನ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಪ್ರೊ. H. B. ಅಸೂಟಿ ಸರ್ ರವರು ವಹಿಸಿದ್ದರು. ಸಭೆಯಲ್ಲಿ ನಿಕಟ ಪೂರ್ವ ಜಿಲ್ಲಾ ಅಧ್ಯಕ್ಷರಾದ ಶಿವಪ್ರಕಾಶ್. ಬಿ. ಮಹಾಜನಶೆಟ್ಟರ್, ಕೊಪ್ಪಳ ಪ್ರಾದೇಶಿಕ ವಿಭಾಗದ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಗಣೇಶ್. ಬಿ. ಸರ್ ಗೌರವ ಉಪಸ್ಥಿತರಿದ್ದು ಸಭೆಯ ಉದ್ಘಾಟನೆಯನ್ನು ನೆರವೇರಿಸಿದರು.ಜಿಲ್ಲಾ ನಿರ್ದೇಶಕರಾದ ಶ್ರೀಯುತ ಯೋಗೀಶ್. ಎ. ಸರ್ ರವರು ಗತ ಸಭೆಯ ನಿರ್ಣಯ ಮಂಡನೆ ಮಾಡಿದರು. ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ 2023-24 ನೇ ಸಾಲಿನಲ್ಲಿ ನಡೆಸಬಹುದಾದ ಕಾರ್ಯಕ್ರಮಗಳ ಕ್ರಿಯಾಯೋಜನೆಯ ಬಗ್ಗೆ,ನವಜೀವನ ಸಮಿತಿಗಳ ಬಲವರ್ಧನೆ, ಫ್ರೀ ಆನ್ಲೈನ್ ಕಾನ್ಫರೆನ್ಸ್ ಸಭೆ,ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ,ತಾಲ್ಲೂಕು ಮಟ್ಟದ ನವಜೀವನೋತ್ಸವ ಕಾರ್ಯಕ್ರಮ, ಶತದಿನೋತ್ಸವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಗದಗ ಜಿಲ್ಲಾ ವ್ಯಾಪ್ತಿಯ ಎಲ್ಲಾ ಕ್ಷೇತ್ರ ಯೋಜನಾಧಿಕಾರಿಗಳು, ಜಿಲ್ಲಾ ಪ್ರಬಂಧಕರು, ಜನಜಾಗೃತಿ ಮೇಲ್ವಿಚಾರಕರು ಉಪಸ್ಥಿತರಿದ್ದರು
