ಭಾರತೀ ನಗರ ನವಜೀವನ ಸಮಿತಿ ಸಭೆ ಹಾಗೂ ಪರಿಸರ ಸ್ವಚ್ಛತಾ ಕಾರ್ಯಕ್ರಮ ವನ್ನು ಮಸಣ ಗೆರೆ ಪಂಚಾಯತ್ ಅಧ್ಯಕ್ಷರು ಉಮೇಶ್ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮಹತ್ವ, ಶ್ರದ್ಧಾ ಕೇಂದ್ರಗಳ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳುವ ಬಗೆ, ಕುಟುಂಬ ಸ್ವಚ್ಛತೆ ಇಟ್ಟುಕೊಳ್ಳುವ ಕುರಿತಾದ ಮಾಹಿತಿ .ಯೋಜನಾ ವ್ಯಾಪ್ತಿಯಲ್ಲಿ ನವಜೀವನ ಸದಸ್ಯರ ಸಂಘಟನೆಗೆ ಪೂರಕವಾಗಿ ಪೋಷಕರ ಮೂಲಕ ಮನ ಭೇಟಿ ನಡೆಸಿ ಸಂಘಟನೆಯನ್ನು ಮಾಡಿ ನವಜೀವನೋತ್ಸವ ಕಾರ್ಯಕ್ರಮ ನಡೆಸುವ ಬಗ್ಗೆ ಪ್ರಾದೇಶಿಕ ಜನಜಾಗೃತಿಕಾರ್ಯಕ್ರಮದ ಯೋಜನಾಧಿಕಾರಿ ಭಾಸ್ಕರ್, ಮಾಹಿತಿ ನೀಡಿದರು. ಈ ಸಂದರ್ಭ ಕ್ಷೇತ್ರ ಯೋಜನಾಧಿಕಾರಿ ಶ್ರೀಮತಿ ಸುವರ್ಣ ಭಟ್ ಹಾಗೂ ಜನ ಜಾಗೃತಿ ಸದಸ್ಯರಾದ ಧರಣಿ ಹಾಗೂ ಕೃಷ್ಣಪ್ಪ ಸಮಯಕ್ಕೆ ಅನುಗುಣವಾಗಿ ಮಾತಾಡಿದರು. ನವಜೀವನ ಸದಸ್ಯರು, ಪೋಷಕರು ಹಾಗೂ ಮೇಲ್ವಿಚಾರಕರು ಉಪಸ್ಥಿತರಿದ್ದರು.
