ಬೆಳ್ತಂಗಡಿ ತಾಲೂಕಿನ ಪಾನಮುಕ್ತರ ” ನವಜೀವನೋತ್ಸವ ” ಕಾರ್ಯಕ್ರಮವನ್ನು ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ .L.H.ಮಂಜುನಾಥ್ ಸರ್ ರವರು ಉದ್ಘಾಟಿಸಿ, ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯರಾದ ಶ್ರೀ ಪ್ರತಾಪಸಿಂಹ ನಾಯಕ್, ಸ್ಥಾಪಕಾಧ್ಯಕ್ಷರಾದ ಶ್ರೀ ಕೆ ವಸಂತ ಸಾಲ್ಯಾನ್, ಮೆಡಿಕಲ್ ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ಶಿಶುಪಾಲ್ ಪೂವನಿ, ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್. ವಿ.ಪಾಯಸ್, ತಾಲೂಕು ನಿಕಟಪೂರ್ವ ಅಧ್ಯಕ್ಷರುಗಳಾದ ಶ್ರೀ ಪಿ.ಕೆ ರಾಜು ಪೂಜಾರಿ, ತಿಮ್ಮಪ್ಪ ಗೌಡ, ಡಿ.ಎ.ರೆಹಮಾನ್ ಉಪಸ್ಥಿತರಿದ್ದರು. ಸುಮಾರು 250 ಮಂದಿ ತಾಲೂಕಿನ ಸಕ್ರೀಯ ನವಜೀವನ ಸದಸ್ಯರು ಭಾಗವಹಿಸಿದ್ದರು. ತಾಲೂಕಿನಲ್ಲಿ 4 ಉತ್ತಮ ನವಜೀವನ ಸಮಿತಿ, ಸಕ್ರೀಯ ನವಜೀವನ ಪೋಷಕರನ್ನು ಅಭಿನಂಧಿಸಲಾಯಿತು.
