ಧಾರವಾಡ ಪ್ರಾದೇಶಿಕ ವಿಭಾಗದ ಗೋಕಾಕ್ ಜಿಲ್ಲಾ ಯೋಜನಾ ವ್ಯಾಪ್ತಿಯ ಗೋಕಾಕ್.2 ತಾಲೂಕಿನ ಮರಡಿ ಮಠದ ಶ್ರೀ ಕಾಡ ಸಿದ್ದೇಶ್ವರ ದೇವಸ್ಥಾನದಲ್ಲಿ ನವಜೀವನೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು. ನವಜೀವನೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ, ನವಜೀವನ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಶ್ರೀ ಕಾಡ ಸಿದ್ದೇಶ್ವರ ಸ್ವಾಮಿಗೆ ಸಂಕಲ್ಪದ ಪೂಜಾ ಕಾರ್ಯಕ್ರಮ, ನವಜೀವನ ಸದಸ್ಯರಿಗೆ ಆಟೋಟ ಕಾರ್ಯಕ್ರಮ ಆ ಯೋಜನೆ ಮಾಡಿದ್ದು ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀ ಅದೃಶ್ಯ ಘನಲಿಂಗ ಚಕ್ರವರ್ತಿ ಪವಾಡೇಶ್ವರ ಮಹಾಸ್ವಾಮಿಗಳು ಕಾಡ ಸಿದ್ದೇಶ್ವರ ಮಠ ದಿವ್ಯ ಸಾನಿಧ್ಯ ವಹಿಸಿದ್ದರು. ಗೋಕಾಕ್ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಸೋಮಶೇಖರ್ ಮಗದುಮ್, ನಿವೃತ್ತ ಶಿಕ್ಷಕರಾದಶ್ರೀ ಟಿ. ಲ್ ಬಡೇಶ್ ಶ್ರೀ ತಾಲ್ಕಟ್ನಾಳ್ ಶ್ರೀ ಹನುಮಂತ ನಾಯಕ್, ಶ್ರೀ ಧರ್ಮೇಂದ್ರ, ನಾಗೇಶ್ ವೈ ಎ,ಶ್ರೀ ನಂದಕುಮಾರ್ ಹಾಗೂ ನವಜೀವನ ಸಮಿತಿಯ ಸದಸ್ಯರು ಕುಟುಂಬದವರು ಉಪಸ್ಥಿತರಿದ್ದರು.
