ಜೀವನದಲ್ಲಿ ಒಮ್ಮೆ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳಿ: ಪೂಜ್ಯ ಹೆಗ್ಗಡೆಯವರು. ಮದ್ದೂರಿನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ 1639ನೇ ಮಧ್ಯವರ್ಜನ ಶಿಬಿರದ ಏಳನೇ ದಿವಸ ಸಂಜೆ ಆಗಮಿಸಿ ಭಗವಂತ ಕೊಟ್ಟ ಈ ಒಂದು ಅವಕಾಶ ಇನ್ನೊಮ್ಮೆ ಸಿಗಲ್ಲ ಜಾಗರೂಕತೆಯಿಂದ ಬಳಸಿಕೊಂಡು ನೆಮ್ಮದಿಯ ಜೀವನ ಮಾಡಿ…. ಕುಡಿತ ಎಂದರೆ ಭಾಗ್ಯದ ಪಾತ್ರೆಗೆ ತೂತ ಇದ್ದಂತೆ… ಈಗ ನಿಮಗೆ ಭಾಗ್ಯದ ಪಾತ್ರೆಯ ಅರಿವಾಗಿದೆ ತೂತನ್ನ ಊರಿನವರು ಸಂಘ ಸಂಸ್ಥೆಗಳು ಎಲ್ಲರೂ ಸೇರಿ ಮುಚ್ಚಿದ್ದಾರೆ ಮಾರ್ಗದರ್ಶನದ ಆಶೀರ್ವಚನಗಳನ್ನು ಮಾಡಿದರು. ಈ ಸಂದರ್ಭ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರು ಕೃಷ್ಣಕುಮಾರ್, ಮಂಡ್ಯಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಹನುಮಂತ, ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ, ನಿರ್ದೇಶಕಿ ಶ್ರೀಮತಿ ಚೇತನ, ಲಿಂಗೇಗೌಡ, ಯೋಗೇಶ್, ವೇದಿಕೆಯ ಪದಾಧಿಕಾರಿಗಳು, ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಜನಪ್ರತಿನಿಧಿಗಳು ಸಂಘ ಸಂಸ್ಥೆಯ ಮುಖಂಡರು, ಶಿಬಿರದ ಚಿಕಿತ್ಸಾ ತಂಡದ ಯೋಜನಾಧಿಕಾರಿ,ಶಿಬಿರ ಅಧಿಕಾರಿ ಆರೋಗ್ಯ ಸಹಾಯಕಿ, ಮೇಲ್ವಿಚಾರಕರು , ಸೇವ ಪ್ರತಿನಿಧಿಗಳು,ನವ ಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
