ಬಾಗಲಕೋಟ ಜಿಲ್ಲೆಯ ಬಾಗಲಕೋಟ ತಾಲ್ಲೂಕಿನಲ್ಲಿ 1636 ನೇ ಮದ್ಯವರ್ಜನ ಶಿಬಿರವು ಉದ್ಘಾಟನೆಗೊಂಡಿತು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಾಗಲಕೋಟ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ 1,636ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ನವನಗರ ಇವರ ಸಹಭಾಗಿತ್ವದಲ್ಲಿ ಶ್ರೀ ಅಂಬಾಭವಾನಿ ದೇವಸ್ಥಾನ ಸಂಸ್ಕೃತಿಕ ಭವನ ನವನಗರದಲ್ಲಿ ಮದ್ಯವರ್ಜನ ಶಿಬಿರದ ಉದ್ಘಾಟನೆಯನ್ನು ಶ್ರೀ ನಾರಾಯಣಸಾ ಕೆ. ಭಾಂಡಗೆ ಇವರು ನೆರವೇರಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ್ರಭುಸ್ವಾಮಿ ಶರಗಣಚಾರಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಮುಖ್ಯ ಅರ್ಚಕರು, ಮುಚಕಂಡಿ ಇವರು ವಹಿಸಿ ಶಿಬಿರಾರ್ಥಿಗಳಿಗೆ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರಾಜು ನಾಯ್ಕರ್ ಸರ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಜ್ಯೋತಿ ಕೆ ಭಜಂತ್ರಿ ನಗರಸಭೆ ಅಧ್ಯಕ್ಷರು ನವನಗರ ಬಾಗಲಕೋಟೆ, ಶ್ರೀ ವಿಟ್ಟಲ್ ಸಾಲಿಯಾನ್ ನಿರ್ದೇಶಕರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ). ಬಾಗಲಕೋಟೆ ಜಿಲ್ಲೆ, ಎಂ.ಜಿ. ಕಿತ್ತಲಿ ಜಿಲ್ಲಾ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು ಬಾಗಲಕೋಟೆ ಜಿಲ್ಲೆ ಶ್ರೀಮತಿ ಜ್ಯೋತಿ ಜೋಳದ್ ತಾಲ್ಲೂಕು ಯೋಜನಾಧಿಕಾರಿಗಳು ಬಾಗಲಕೋಟೆ ತಾಲೂಕು ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸರ್ವರಿಗೂ ಸ್ವಾಗತವನ್ನು ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಜ್ಯೋತಿ ಜೋಳದ ಮೇಡಂ ಅವರು ನಡೆಸಿಕೊಟ್ಟರು. ಧನ್ಯವಾದ ಕಾರ್ಯಕ್ರಮವನ್ನು ವಲಯದ ಮೇಲ್ವಿಚಾರಕರಾದಂತಹ ಮಹೇಶ್ ನಾಯಕ್ ಸರ್ ಅವರು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ನವನಗರ ವಲಯದ ಮೇಲ್ವಿಚಾರಕರಾದ ಮಹಾಂತೇಶ್ ಸರ್ ಅವರು ನಿರ್ವಹಿಸಿದರು
