ಧಾರವಾಡ ಪ್ರಾದೇಶಿಕ ವಿಭಾಗದ ಚಿಕ್ಕೋಡಿ ಜಿಲ್ಲಾ ಯೋಜನಾ ವ್ಯಾಪ್ತಿಯ ಹುಕ್ಕೇರಿ ತಾಲೂಕಿನ ಮದಿಹಳ್ಳಿಯಲ್ಲಿ ನವ ಜೀವನ ಸದಸ್ಯರ ವಾರ್ಷಿಕೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು. ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನವಜೀವನ ಸದಸ್ಯರಿಗೆ ಆಟೋಟ ಕಾರ್ಯಕ್ರಮ ಆ ಯೋಜನೆ ಮಾಡಿದ್ದು ಉದ್ಘಾಟನೆ ಕಾರ್ಯಕ್ರಮದಲ್ಲಿ , ಜನಜಾಗೃತಿ ಸದಸ್ಯರು ಹಾಗೂ ಪ್ರೊಪೆಸರ್ ರಾದ ಪಿ. ಜಿ. ಕೊಣ್ಣೂರ್,ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಪಾಟೀಲ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಶಿವಾಜಿ ಗಾಡೀವಡ್ಡರ್, ಶ್ರೀ ಮಾಣಿಕ್ ಭಾಗಿ ಹುಕ್ಕೇರಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯದ ಶ್ರೀಮತಿ ಅನಿತಾ ಬೆಳಗಾವ್ಕಾರ್, ಧಾರವಾಡ ಪ್ರಾದೇಶಿಕ ವಿಭಾಗದ ಜನಜಾಗ್ರತಿ ಯೋಜನಾಧಿಕಾರಿ ನಾಗೇಶ್ ವೈ ಎ, ಮೇಲ್ವಿಚಾರಕರಾದ ಉಮೇಶ್ ಹಡಪದ್, ಶ್ರೀಮತಿ ಚನ್ನಮ್ಮ, ಮತ್ತು ಹಾಗೂ ನವಜೀವನ ಸಮಿತಿಯ ಸದಸ್ಯರು ಕುಟುಂಬದವರು ಉಪಸ್ಥಿತರಿದ್ದರು.
