ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುರಪುರ ತಾಲೂಕು ಯಾದಗಿರಿ ಜಿಲ್ಲೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಸುರಪುರ, ತಾಲೂಕು ವೀರಶೈವ ಲಿಂಗಾಯಿತ ಸಮಿತಿ ರಂಗಂಪೇಟೆ/ಸುರಪುರ, ನಗರಸಭೆ ಸುರಪುರ, ಶೌರ್ಯ ವಿಪತ್ತು ನಿರ್ವಹಣಾ ಘಟಕ, ವೈದ್ಯರು ಮತ್ತು ಮೆಡಿಕಲ್ ಅಸೋಸಿಯೇಷನ್ ಸುರಪುರ, ಆರಕ್ಷಕ ಠಾಣೆ ಸುರಪುರ, ಸ್ಥಳೀಯ ಸಂಘ ಸಂಸ್ಥೆಗಳು, ಸ್ಥಳೀಯ ಎಲ್ಲಾ ಇಲಾಖೆಗಳು, ಸಮಸ್ತ ದಾನಿಗಳು ಹಾಗೂ ಸಾರ್ವಜನಿಕರ ಸಹಕಾರ ಮತ್ತು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು ಸುರಪುರ/ಹಸನಾಪೂರ ವಲಯ ಇವರುಗಳ ಸಹಕಾರದೊಂದಿಗೆ ಪರಮಪೂಜ್ಯ ಡಾll ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾll ಹೇಮಾವತಿ ವಿ. ಹೆಗಡೆಯವರ ಕೃಪಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ 1634ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ವೀರಶೈವ ಕಲ್ಯಾಣ ಮಂಟಪ ರಂಗಂಪೇಟೆ ಇಲ್ಲಿ ಜರುಗಿತು.ಶ್ರೀ ರಾಜೇಶ್.ಕೆ ಯೋಜನಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಲಬುರ್ಗಿ ಪ್ರಾದೇಶಿಕ ವಿಭಾಗ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುರಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ನರಸಿಂಹ ನಾಯಕ ಇವರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಪೂಜ್ಯ ಶ್ರೀ ಷ.ಬ್ರ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠ ದೇವಾಪೂರ ಇವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವದಿಸಿದರು.
ಕಾರ್ಯಕ್ರಮದ ಗೌರವಾಧ್ಯಕ್ಷತೆಯನ್ನು ಡಾl ಸುರೇಶ್ ಸಜ್ಜನ ಗೌರವಾಧ್ಯಕ್ಷರು 1634ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಸುರಪುರ ಇವರು ವಹಿಸಿ ಶುಭವನ್ನು ಕೋರಿದರು.
ಅಧ್ಯಕ್ಷತೆಯನ್ನು ಶ್ರೀ ಸೂಗೂರೇಶ ವಾರದ ಅಧ್ಯಕ್ಷರು 1634ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಸುರಪುರ ಇವರು ವಹಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ಕಮಲಾಕ್ಷ ಇವರು ಮಾತನಾಡಿ ಸಂಸ್ಥೆಯ ಹುಟ್ಟು, ಬೆಳವಣಿಗೆ, ನಡೆದು ಬಂದ ಹಾದಿಯ ಪರಿಚಯದೊಂದಿಗೆ ಶುಭಾಶಯವನ್ನು ಕೋರಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಕಿಶೋರಚಂದ್ ಜೈನ್ ಅಧ್ಯಕ್ಷರು ಗಂಜ ವರ್ತಕರ ಸಂಘ ಸುರಪುರ, ಶ್ರೀಮತಿ ಸುಜಾತಾ ವೇಣುಗೋಪಾಲ ನಾಯಕ ಅಧ್ಯಕ್ಷರು ನಗರಸಭೆ ಸುರಪುರ, ಡಾl ಎಸ್.ಪಿ ದಯಾನಂದ ನಿರ್ದೇಶಕರು ಡಿ.ಎಸ್ ಮ್ಯಾಕ್ಸ್ ಬೆಂಗಳೂರು, ಶ್ರೀ ಬಸಲಿಂಗಪ್ಪ ಪಾಟೀಲ್ ಗೌರವಾಧ್ಯಕ್ಷರು ತಾ.ವಿ.ಸ ಸುರಪುರ, ಶ್ರೀ ಬಸವರಾಜ ಜಮದ್ರಖಾನಿ ಅಧ್ಯಕ್ಷರು ಕನ್ನಡ ಸಾಹಿತ್ಯ ಸಂಘ ಸುರಪುರ, ಡಾl ರಾಜಾ ವೆಂಕಟಪ್ಪ ನಾಯಕ ತಾಲೂಕು ವೈದ್ಯಾಧಿಕಾರಿಗಳು ಸುರಪುರ, ಶ್ರೀ ಮಲ್ಲಣ್ಣ ಸಾಹುಕಾರ ಗಣ್ಯರು, ಶ್ರೀ ನಂದಕುಮಾರ್ ಪಿ ಪಿ ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ನಾಗೇಂದ್ರ ಹೆಚ್.ಎಸ್ ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀಮತಿ ಸೌಮ್ಯ ಆರೋಗ್ಯ ಸಹಾಯಕಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಇವರುಗಳು ಉಪಸ್ಥಿತರಿದ್ದರು. ಮೇಲ್ವಿಚಾರಕರುಗಳಾದ ಶ್ರೀಮತಿ ಸುಮಂಗಲಾ.ಎಂ, ಶ್ರೀಮತಿ ಬಸಮ್ಮ ಮತ್ತು ತಾಲೂಕಿನ ಎಲ್ಲಾ ಮೇಲ್ವಿಚಾರಕರುಗಳು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ಕಛೇರಿ ಸಿಬ್ಬಂದಿಗಳು, ಹಾಗೂ ಸ್ಥಳೀಯ ಸೇವಾಪ್ರತಿನಿಧಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮವನ್ನು ಶ್ರೀ ಸೂಗೂರೇಶ ವಾರದ ಅಧ್ಯಕ್ಷರು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಸುರಪುರ ಇವರು ಸ್ವಾಗತಿಸಿ, ಶ್ರೀ ಸಂತೋಷ್ ಎ.ಎಸ್ ಕ್ಷೇತ್ರ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುರಪುರ ತಾಲೂಕು ಇವರು ನಿರ್ವಹಿಸಿ ವಂದಿಸಿದರು.
