ಜಗಳೂರು ಜಿಲ್ಲಾ ಜನಜಾಗೃತಿ ವೇದಿಕೆಯ 3ನೇ ಸಭೆಯು ಜಿಲ್ಲಾ ವೇದಿಕೆಯ ಅಧ್ಯಕ್ಷರಾದ ಶ್ರೀ ಷಡಕ್ಷರಪ್ಪರವರ ಅಧ್ಯಕ್ಷತೆಯಲ್ಲಿ ಚಳ್ಳಕೆರೆಯ ಸಾಯಿ ಮಂದಿರದ ಆವರಣದಲ್ಲಿ ದೀಪ ಬೆಳಗಿಸುವುದರ ಮೂಲಕ ಉದ್ದೀಪನಗೊಂಡಿತು. ಸಭೆಯಲ್ಲಿ ಹಿಂದಿನ ಸಭೆಯ ಅವಲೋಕನವನ್ನು ಜಿಲ್ಲಾ ಕಾರ್ಯದರ್ಶಿಗಳು ಶ್ರೀ ಜನಾರ್ದನ ಸರ್ ರವರು ಮಂಡಿಸಿದರು. ಎಲ್ಲರ ಒಪ್ಪಿಗೆಯೊಂದಿಗೆ ಅನುಮೋದನೆಗೊಂಡಿತು. ಸಭೆಯಲ್ಲಿ ತಾಲೂಕ್ ವಾರು ಸ್ವಾಸ್ಥ್ಯ ಸಂಕಲ್ಪ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ವಿಚಾರ ವಿನಿಮಯ ವಿಮರ್ಶೆ ನಡೆಸಲಾಯಿತು.ಒಟ್ಟು ಜಿಲ್ಲಾ ವ್ಯಾಪ್ತಿಯಲ್ಲಿ 50 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಬೇಕಿದ್ದು ಒಟ್ಟು 46 ಕಾರ್ಯಕ್ರಮ ಶಾಲಾ ಕಾಲೇಜುಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳು, ಜಿಲ್ಲಾ ವೇದಿಕೆಯ ಸದಸ್ಯರ ಉಪಸ್ಥಿತಿಯಲ್ಲಿ ನಡೆಸಲಾಗಿದೆ.ಸ್ವಾಸ್ತ್ಯ ಸಂಕಲ್ಪ ತರಬೇತುದಾರರ ತರಬೇತಿ ಮತ್ತು ಆಯ್ಕೆ ಬಗ್ಗೆ ಚರ್ಚೆ ನಡೆಸಿದ್ದು ಒಟ್ಟು 5 ತಾಲೂಕಿನಲ್ಲಿ ಈಗಾಗಲೇ 24 ತರಬೇತುದಾರರನ್ನು ಆಯ್ಕೆ ಮಾಡಿದ್ದು ತರಬೇತಿಗಾಗಿ ದಿನ ನಿಗದಿ ಮಾಡುವ ಬಗ್ಗೆ ಚರ್ಚಿಸಲಾಯಿತು. 2022-23ರ ಕ್ರಿಯಾ ಯೋಜನೆಯ ಪ್ರಕಾರ 3 ಮದ್ಯವರ್ಜನ ಶಿಬಿರ ನಡೆಸಬೇಕಾಗಿದ್ದು 2 ಶಿಬಿರ ಯಶಸ್ವಿಯಾಗಿ ನಡೆದಿದೆ. ಅದರ ಅನುಪಾಲನೆಗಾಗಿ ಮನೆ ಬೇಟಿ ಮಾಡುವುದರ ಜೊತೆಗೆ ಅವರಿಗೆ ವಿಶೇಷ ಮುತುವರ್ಜಿ ವಹಿಸುವ ಬಗ್ಗೆ ಚರ್ಚಿಸಿ, 2023-24ರಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ 5ಶಿಬಿರಗಳನ್ನು ಮಾಡುವ ಬಗ್ಗೆ ನಿರ್ಣಯ ಮಾಡಲಾಯಿತು.ನವಜೀವನ ಸದಸ್ಯರ ಬಲಪಡಿಸುವ ನಿಟ್ಟಿನಲ್ಲಿ ಪೋಷಕರ ಆಯ್ಕೆ ಕರ್ತವ್ಯ ನಿರ್ವಹಣೆ ಬಗ್ಗೆ ಪೋಷಕರ ಪಟ್ಟಿ ನೀಡಿ ತರಬೇತಿಯ ಬಗ್ಗೆ ನಿರ್ಣಯ ಮಾಡಲಾಯಿತು. ತಾಲೂಕ್ ಮಟ್ಟದ ನವಜೀವನೋತ್ಸವ, ಹಕ್ಕೊತ್ತಾಯ, ಶಾಲೆಯಲ್ಲಿ ಮಾದಕ ದ್ರವ್ಯ ಮುಕ್ತ ಕ್ಲಬ್, ಜನಜಾಗೃತಿ ವೇದಿಕೆಯ ಹೊಸ ಸದಸ್ಯರ ಸೇರ್ಪಡೆ ಮತ್ತು ಹೊಸ ಸದಸ್ಯರ ಪರಿಚಯ ಮಾಡಲಾಯಿತು.ಮುಂದಿನ ಸಭೆ ಮೊಳಕಾಲ್ಮೂರು ಯೋಜನಾ ವ್ಯಾಪ್ತಿಯಲ್ಲಿ ಮಾರ್ಚ್ ತಿಂಗಳಲ್ಲಿ ಮಾಡುವ ಬಗ್ಗೆ ತಿಳಿಸಲಾಯಿತು. ನಾಯಕನಹಟ್ಟಿಯ ಜಿಲ್ಲಾ ವೇದಿಕೆಯ ಸದಸ್ಯರಾದ ಶ್ರೀ ಶಿವಸ್ವಾಮಿಯವರು ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿದ್ದು, ಅವರನ್ನು ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಿಕಟ ಪೂರ್ವ ಅದ್ಯಕ್ಷರು, 5 ತಾಲೂಕಿನ ಜಿಲ್ಲಾ ವೇದಿಕೆಯ ಪದಾಧಿಕಾರಿಗಳು, 5 ತಾಲೂಕಿನ ಯೋಜನಾದಿಕರಿಗಳು ಉಪಸ್ಥತರಿದ್ದರು. ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ನಾಗರಾಜ್ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿಗಳು ಜನಾರ್ದನ್ ಸರ್ ವಂದಿಸಿದರು.
