ಕಡಬ ತಾಲೂಕು ಸವಣೂರು ವಲಯದ ಜನಜಾಗೃತಿ ಮತ್ತು ನವಜೀವನ ಸಮಿತಿ ಹಾಗೂ ನೂತನ ಒಕ್ಕೂಟದ ಅಧ್ಶಕ್ಷರ ಸಭೆ

Janajagurthi Vedike News

ಕಡಬ ತಾಲೂಕು ಸವಣೂರು ವಲಯದ ಜನಜಾಗೃತಿ ಮತ್ತು ನವಜೀವನ ಸಮಿತಿ ಹಾಗೂ ನೂತನ ಒಕ್ಕೂಟದ ಅಧ್ಶಕ್ಷರ ಸಭೆಯು ಸವಣೂರು ಯುವಕ ಮಂಡಲದ ಸಭಾ ಭವನದಲ್ಲಿ ದಿನಾಂಕ 15/12/22ರಂದು ಸವಣೂರು ವಲಯದ ಜನಜಾಗೃತಿ ವಲಯಾಧ್ಶಕ್ಷರಾದ ಮಹೇಶ್ ಯನ್. ಕೆ. ಕಾನೂನು ಸಲಹೆಗಾರರು ಪುತ್ತೂರು ಇವರ ಅಧ್ಶಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸವಣೂರು ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ವಲಯಾಧ್ಶಕ್ಷರಾದ ವೇಣುಗೊಪಾಲ ಕಳುವಾಜೆ ಯವರು ಉಧ್ಘಾಟಿಸಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಶ ನಾಯ್ಕ ರವರು ದಿನಾಂಕ 23/12/22ರಂದು ನಡೆಯಲಿರುವ ಪುತ್ತೂರು ಕಡಬ ತಾಲೂಕು ಕೇಂದ್ರ ಒಕ್ಕೂಟದ ಪದಗೃಹಣ ಹಾಗೂ ನವಜೀವನ ಸಮಾವೇಶದ ಪೂರ್ವತಯಾರಿಯ ಕುರಿತು ಮಾತನಾಡಿದರು. ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಯನ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸವಣೂರು ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ನೂತನ ವಲಯಾಧ್ಶಕ್ಷರಾಗಿ ರಾಮಚಂದ್ರ ರವರು ಆಯ್ಕೆಯಾದರು. ವೇದಿಕೆಯಲ್ಲಿ ವಲಯದ ಜನಜಾಗೃತಿ ಪಧಾದಿಕಾರಿ ಸುರೇಶ್ ರೈ ಸೂಡಿಮೂಲೆ ಹಾಗೂ ಗಿರಿಶಂಕರ್ ಸಾಲೂರು ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಮನೋರಮಾ ಸ್ವಾಗತಿಸಿ ಪ್ರೇಮಾ ರವರು ವಂದಿಸಿದರು.
ವಲಯದ ಅಧ್ಶಕ್ಷರುಗಳು ನವಜೀವನ ಗ್ರಾಮ ಸಮಿತಿ ಅಧ್ಶಕ್ಷರುಗಳು ಪ್ರಭಾರ ಮೇಲ್ವೀಚಾರಕಿ ಸುನೀತಾ ಹಾಗೂ ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.