ಮಂದಾರ್ತಿ ವಲಯದ 1594 ನೇ ಮದ್ಯಾವರ್ಜನ ಶಿಬಿರದ ನವಜೀವನ ಸಮಿತಿಯ ಸಭೆಯನ್ನು ಇಂದು ಶೇಡಿಕೋಡ್ಲು ದುರ್ಗಾ ಸಭಂಗಣದಲ್ಲಿ ನೆಡೆಸಲಾಯಿತು. ಈ ಸಭೆಯನ್ನು ತಾಲೂಕಿನ ಜನಜಾಗ್ರತಿ ಅಧ್ಯಕ್ಷರಾದ ಶ್ರೀಯುತ ಅಚ್ಚುತ್ ಪೂಜಾರಿಯವರು ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭರೈಸಿದರು. ಹಾಗೂ ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕರಾದ ಶ್ರೀಯುತ ಶಿವರಾಯ ಪ್ರಭು ರವರು ಕಾರ್ಯಕ್ರಮದ ಬಗ್ಗೆ ಮತ್ತು ನವಜೀವನ ಸದಸ್ಯರ ಪರವಾಗಿ ಮಾಹಿತಿ ಮಾರ್ಗದರ್ಶನ ನೀಡಿದರು. ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗ್ರತಿ ವೇದಿಕೆಯ ಯೋಜನಾಧಿಕಾರಿಯವರದ ಶ್ರೀಯುತ ತಿಮ್ಮ ಯ್ಯ ನಾಯ್ಕ ರವರು ಸಮಿತಿಯ ಸದಸ್ಯರಿಗೆ ಹೊಸ ಜೀವನದ ಬಗ್ಗೆ ಹಾಗೂ ಮುಂದಿನ ಗುರಿ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು ಹಾಗೂ ತಾಲೂಕಿನ ಜನಜಾಗ್ರತಿ ಸದಸ್ಯರಾದ ಶ್ರೀಯುತ ಪ್ರಕಾಶ್ ಶೆಟ್ಟಿ ಮತ್ತು ಶ್ರೀಮತಿ ನಿರ್ಮಲ S ಶೆಟ್ಟಿ ಮತ್ತು ತಾಲೂಕಿನ ಯೋಜನಾಧಿಕಾರಿಯವರದ ಶ್ರೀಯುತ ದಿನೇಶ್ ಶೆರುಗಾರ ಮತ್ತು ಜಿಲ್ಲೆಯ ಭಜನಾ ಪರಿಷತ್ ಕಾರ್ಯದರ್ಶಿಯಾವಾರದ ಶ್ರೀಯುತ ಪ್ರಕಾಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನವಜೀವನ ಸಮಿತಿಯ ಸದಸ್ಯರು ಹಾಗೂ ಅವರ ಕುಟುಂಬದವರು ಮತ್ತು ಸ್ಥಳೀಯ ಸೇವಾಪ್ರತಿನಿಧಿಯಾವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರಿಗೆ ವಲಯದ ಮೇಲ್ವಿಚಾರಕರಾದ ಅಜಿತ್ ಕುಮಾರ ಸ್ವಾಗತಿಸಿ. ಕಾರ್ಯಕ್ರಮಕ್ಕೆ ಸೇವಾಪ್ರತಿನಿಧಿಯವರಾದ ಶ್ರೀಮತಿ ಭಾರತಿಯಾವರು ನಿರೂಪಿಸಿ ಸೇವಾಪ್ರತಿನಿಧಿ ಲಕ್ಷ್ಮೀಯಾವರು ಧನ್ಯವಾದಗಳು ಮಾಡಿದರು.
