ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಶಾಂತಿಗ್ರಾಮ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಘಟಕ ಹಾಸನ ಇದರ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ನವಜೀವನೋತ್ಸವ ಕಾರ್ಯಕ್ರಮವನ್ನು ಸತ್ಯಮಂಗಲ ವಲಯದ ಗವೇನಹಳ್ಳಿಯ ಶ್ರೀ ಮಾರಿಕಾಂಬ ಸಮುದಾಯ ಭವನದಲ್ಲಿ ನಡೆಸಲಾಯಿತು .ಸಭೆಯಲ್ಲಿ ಮುಖ್ಯ ಭಾಷಣವನ್ನು ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಸನ ಇದರ ಅಧ್ಯಕ್ಷರಾದ ಡಾll ಹೆಚ್ ಎಲ್ ಮಲ್ಲೇಶ್ ಗೌಡರವರು ಗಾಂಧಿ ವಿಚಾರಧಾರೆಗಳ ಬಗ್ಗೆ ಮಾತನಾಡುತ್ತಾ ; ಸರಳತೆ ,ಪ್ರಾಮಾಣಿಕತೆ ಇವೆಲ್ಲವೂ ನಮ್ಮಲ್ಲಿ ಯಾವತ್ತೂ ಜಾಗೃತವಾಗಿರಬೇಕು ಎಂದು ಕರೆಯಿತ್ತರು .ಜೊತೆಗೆ ಯಾವುದನ್ನೂ ಮಾಡಬೇಕು ; ಯಾವುದನ್ನು ಮಾಡಬಾರದು ಅನ್ನುವುದನ್ನು ಸರಿಯಾಗಿ ಅರ್ಥೈಸಿಕೊಳ್ಳುವುದೇ ನಿಜವಾದ ಸಂಸ್ಕಾರ ಎಂದರು ಕಾರ್ಯಕ್ರಮದಲ್ಲಿ ಧಾರ್ಮಿಕ ಆಚರಣೆಗಳ ವಿಷಯದಲ್ಲಿ ಮೂಢನಂಬಿಕೆ ಯಾವತ್ತೂ ಸರಿಯಲ್ಲ ಎಂದು ಮಾತನಾಡಿದ ಜಿಲ್ಲಾ ಹಿರಿಯ ನಿರ್ದೇಶಕರಾದ ಶ್ರೀಮತಿ ಮಮತಾ ಹರೀಶ್ ರಾವ್ ರವರು ; ಪ್ರಾಮಾಣಿಕತೆ ,ನಂಬಿಕೆ ,ನಿಷ್ಠೆ ಮತ್ತು ಸಮಯಪ್ರಜ್ಞೆ ಈ ಗುಣಗಳನ್ನು ನಾವುಗಳು ಬೆಳೆಸಿಕೊಳ್ಳುವುದು ಮುಖ್ಯ ಎಂದರು. ಸಭೆಯಲ್ಲಿ ನಗರ ಸಭಾ ಸದಸ್ಯರಾದ ಶ್ರೀ ರಕ್ಷಿತ್ ಕುಮಾರ್ ,PDO ಶ್ರೀ ಪ್ರಕಾಶ್ , ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಬೊಮ್ಮೇಗೌಡ ,ಶ್ರೀ ತುಳಸೀ ರಾಮ್ ಮೊದಲಾದವರು ಉಪಸ್ಥಿತರಿದ್ದರು.
