ಸಕಲೇಶಪುರ ತಾಲೂಕು ಹಾಗೂ ಜನಜಾಗೃತಿ ವೇದಿಕೆ ವತಿಯಿಂದ ಸಕಲೇಶಪುರ ಸ್ವಾಮಿ ದೇವಸ್ತಾನದಿಂದ ಶೌರ್ಯ ಸದಸ್ಯರು ,ನವಜೀವನ ಸದಸ್ಯರು ಮತ್ತು ಸಂಘದ ಸದಸ್ಯರು ಸೇರಿ ಜಾಥ ದ ಮೂಲಕ ನಗರದಲ್ಲಿ ದುಶ್ಚಟದ ವಿರುದ್ಧ ಘೋಷಣೆ ಗಳನ್ನು ಕೂಗುತ್ತಾ ಮೆರವಣಿಗೆ ಮೂಲಕ ಬಂದು ಗಾಂಧಿ ಸ್ಮೃತಿ ಮತ್ತು ನವಜೀವನೋಸ್ತವ ಕಾರ್ಯಕ್ರಮವನ್ನ ಪುರಸಭಾ ಭವನ ದಲ್ಲಿ ನಡೆಸಲಾಯಿತು ,ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭಾ ಅಧ್ಯಕ್ಷರಾದ ಕಾಡಪ್ಪ ರವರು ನೆರವೇರಿಸಿದರು,ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ಸದಸ್ಯರಾದ ಉಮಾನಾಥ ಸುವರ್ಣ ವಹಿಸಿದ್ದರು,ಗಾಂಧೀಜಿಗೆ ಪುಷ್ಪಾರ್ಚನೆ ಯನ್ನ dysp ಲಕ್ಷ್ಮೆಗೌಡ ನೆರವೇರಿಸಿ ಜನರು ದುಶ್ಚಟ ದಿಂದಾಗುವ ಅನಾಹುತ ಹಾಗೂ ಇದರಿಂದ ಎಚ್ಚರಿಕೆಯಿಂದ ಇರಬೇಕಾದ ಬಗ್ಗೆ ಮಾಹಿತಿ ನೀಡಿದರು,ಮುಖ್ಯ ಅತಿಥಿ ಯಾಗಿ ಜಿಲ್ಲಾ ನಿರ್ದೇಶಕರಾದ ಮಮತಾ ಹರೀಶ್ ರಾವ್ ವಹಿಸಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಜನರಲ್ಲಿ ದುಶ್ಚಟ ದ ಅರಿವಿನ ಅಗತ್ಯತೆ ಬಗ್ಗೆ ತಿಳಿಸಿದರು, ಜಿಲ್ಲಾ ವೇದಿಕೆ ಅಧ್ಯಕ್ಷರಾದ dr ನವೀನ್ ಚಂದ್ರ ಶೆಟ್ಟಿ,ಪತ್ರ ಕರ್ತ ಸಂಘದ ಅಧ್ಯಕ್ಷರಾದ ಪ್ರಸನ್ನ ಕುಮಾರ್,ವೇದಿಕೆ ಸದಸ್ಯರಾದ kr ರಾಮಚಂದ್ರ,ಗಿರೀಶ್ ಮಂಜುನಾಥ್, ಧರ್ಮರಾಜ ಯೋಜನಾಧಿಕಾರಿ ಪುರುಷೋತ್ತಮ್ ,ವಿಪತ್ತು ನಿರ್ವಹಣಾ ಸಂಯೋಜಕರಾದ ಮಧುವರನ್ ಉಪಸ್ಥಿತರಿದ್ದರು.
