ತರೀಕೆರೆ ತಾಲೂಕಿನಲ್ಲಿ ಗಾಂಧಿ ಸ್ಮೃತಿ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರೀಕೆರೆ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ(ರಿ) ಬೆಳ್ತಂಗಡಿ ಇವರ ಸಂಯುಕ್ತಾಶ್ರಯದಲ್ಲಿ ಪೂಜ್ಯರ ಆಶೀರ್ವಾದಗಳೊಂದಿಗೆ ಈ ದಿನ ಗಾಂಧಿ ಸ್ಮೃತಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.ಸದ್ರಿ ಕಾರ್ಯಕ್ರಮವನ್ನು ತರೀಕೆರೆ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀನಿವಾಸ್ ಅವರು ಉದ್ಘಾಟಿಸಿ ಯೋಜನೆ ಅನೇಕ ಕಾರ್ಯಕ್ರಮಗಳ ಮೂಲಕ ಸದಸ್ಯರು ಉಳಿತಾಯ, ಬ್ಯಾಂಕ್ ಜ್ಞಾನ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಕೃಷಿ ಅನುದಾನಗಳು ಕೃಷಿ ಮೇಳ, ಕೃಷಿ ಯಂತ್ರಧಾರೆ ಕಾರ್ಯಕ್ರಮದ ಮೂಲಕ ಸದಸ್ಯರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.ಅಧ್ಯಕ್ಷತೆಯನ್ನು ಶ್ರೀಮತಿ ಕಮಲ ರಾಜೇಂದ್ರ ಅಧ್ಶಕ್ಷರು ಪುರಸಭೆ ತರೀಕೆರೆ ಇವರು ವಹಿಸಿದ್ದರು,ಪುರಸಭೆ ಸ್ಥಾಯಿ ಸಮಿತಿ ಅಧ್ಶಕ್ಷರಾದ ದಾದಾಪಿರ್ ˌಹಿರಿಯ ಪತ್ರಕರ್ತರಾದ ಅನಂತ ನಾಡಿಗ್ ˌಪುರಸಭಾ ಸದಸ್ಶೆ ಶ್ರೀಮತಿ ಪಾರ್ವತಮ್ಮ ಮತ್ತು ಜಿಲ್ಲಾ ಜನಜಾಗ್ರತಿ ಸದಸ್ಶರಾದ ˌಟಿ ಶ್ರೀಧರ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಶಕ್ತಿಯಾಗಿ ಶ್ರೀ ಗಣೇಶ್ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಇವರು ಮಾತನಾಡಿದರು ಪ್ರಾಸ್ತಾವಿಕವಾಗಿ ಮಾನ್ಯ ಯೋಜನಾಧಿಕಾರಿ ಕುಸುಮಾಧರ್ ಮಾತನಾಡಿ ಯೋಜನೆ ಕಾರ್ಯಕ್ರಮ ಗಳ ಬಗ್ಗೆ ತಿಳಿಸಿದರು,ನವ ಜೀವನ ಸಮಿತಿಯ ಸದಸ್ಯರು,ಪತ್ರಿಕಾ ಮಿತ್ರರು,ಸ್ವ ಸಹಾಯ ಸಂಘಗಳ ಸದಸ್ಯರು ಯೋಜನಾ ಸಿಬ್ಬಂದಿಗಳು ಸೇವಾಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.