ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗದಗ ಜಿಲ್ಲೆ ವ್ಯಾಪ್ತಿಯ ನವಲಗುಂದ ತಾಲ್ಲೂಕಿನ ಗವಿಮಠದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ,ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಇವರ ಸಹಕಾರದೊಂದಿಗೆ ಗಾಂಧಿಸ್ಮೃತಿ ವ್ಯಸನಮುಕ್ತ ಸದಸ್ಯರ ಅಭಿನಂದನಾ ಸಮಾವೇಶ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗದಗ ಜಿಲ್ಲೆ ವ್ಯಾಪ್ತಿಯ ನವಲಗುಂದ ತಾಲ್ಲೂಕಿನ ಗವಿಮಠದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ,ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಇವರ ಸಹಕಾರದೊಂದಿಗೆ ಗಾಂಧಿಸ್ಮೃತಿ ವ್ಯಸನಮುಕ್ತ ಸದಸ್ಯರ ಅಭಿನಂದನಾ ಸಮಾವೇಶ ಗದಗ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ HB ಅಸೂಟಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು,ಈರಣ್ಣ ಚವಡಿ ,ಶಿವಯೋಗಿ ಸವದತ್ತಿ ,ರಮೇಶ್ ಪಲ್ಲೇದ್ ,ಪುರಸಭೆ ಮಾಜಿ ಉಪಾಧ್ಯಕ್ಷರಾದ ಪೂರ್ಣಿಮಾ ಜೋಶಿ ಇವರುಗಳ ಉಪಸ್ಥಿತಿಯಲ್ಲಿ ಜಿಲ್ಲಾ ನಿರ್ದೇಶಕರಾದ ಯೋಗೀಶ್ವರ್ ಎ ಅವರು ಕಾರ್ಯಕ್ರಮ ಉದ್ಘಾಟಿಸಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನಜಾಗೃತಿ ಕಾರ್ಯಕ್ರಮಗಳ ಕುರಿತು ಮಾಹಿತಿ ಮಾರ್ಗದರ್ಶನ ನೀಡಿದರು ಹಾಗೂ ನವಜೀವನ ಸದಸ್ಯರನ್ನು ಅಭಿನಂದಿಸಲಾಯಿತು ರಾಷ್ಟ್ರಪಿತ ಗಾಂಧೀಜಿಯವರಿಗೆ ಪುಷ್ಪನಮನ ಸಲ್ಲಿಸಲಾಯಿತು, ವ್ಯಸನ ಮುಕ್ತ ಸದಸ್ಯರಾದ ಜಗದೀಶ್ ಬ್ಯಾಳಿ ಬೆಳವಟಿಗೆ, ಬಸವರಾಜ ಬಾರಕೇರ ಶಾನವಾಡ, ಅಳಗವಾಡಿಯ ಲಕ್ಷ್ಮಿ ದಂಪತಿಗಳು, ಮದ್ಯ ಮುಕ್ತಿಯಿಂದ ನಮ್ಮ ಕುಟುಂಬದಲ್ಲಿ ಆದ ಬದಲಾವಣೆ ಕಳೆದುಕೊಂಡ ಕುಟುಂಬದ ಪ್ರೀತಿ ಸಹಬಾಳ್ವೆಯಿಂದ ಉದ್ಯೋಗಆರಂಭಿಸಿ ಉತ್ತಮ ಜೀವನ ನಡೆಸುತ್ತಿದ್ದೇವೆ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಗಣ್ಯರು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಅಣ್ಣಪ್ಪ ಬಾಗಿ ಮಹಾತ್ಮಾ ಗಾಂಧೀಜಿಯವರ ಕನಸು ನನಸು ಮಾಡುವಲ್ಲಿ ಪೂಜ್ಯರನ್ನು ನಾವು ಎಷ್ಟು ಹೊಗಳಿದರೂ ಸಾಲದು ಪೂಜ್ಯರ ಯೋಜನೆಗಳಿಂದ ಕರ್ನಾಟಕದ ಸಾಮಾನ್ಯ ಜನರ ಬದುಕು ಹಸನಾಗಿದೆ ಎಂದರು, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಮಾಧವ ನಾಯಕ್ ರವರು ಕೌಟುಂಬಿಕ ಸಾಮರಸ್ಯ ಕುರಿತು ಮಾಹಿತಿ ನೀಡಿದರು, ನವಜೀವನ ಸಮಿತಿಯ ಸದಸ್ಯ ರು ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು