ಚಿಂತಾಮಣಿ ತಾಲೂಕಿನಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಚಿಕ್ಕಬಳ್ಳಾಪುರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಚಿಂತಾಮಣಿ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ವ್ಯಸನ ಮುಕ್ತ ಸಾಧಕರ ಸಮಾವೇಶವನ್ನು ಚಿಂತಾಮಣಿ ತಾಲೂಕಿನ ಶಿವ ಸೂರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಚಿಂತಾಮಣಿ ತಾಲೂಕಿನ ನಗರಸಭೆ ಅಧ್ಯಕ್ಷೆರಾಗಿರುವಂತ ಶ್ರೀಮತಿ ರೇಖಾ ಉಮೇಶ್ ಅಧ್ಯಕ್ಷತೆ ವಹಿಸಿದ್ದರು ಹಾಗೆಯೇ ಬೆಂಗಳೂರು ವಿಭಾಗದ ಪ್ರಾದೇಶಿಕ ನಿರ್ದೇಶಕರಾದಂತಹ ಶ್ರೀಯುತ ಶೀನಪ್ಪ ಸರ್ ಅವರು ಹಾಗೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಿ ಮಂಜುನಾಥ್ ಹಾಗೆಯೇ ಪ್ರಗತಿಪರ ಕೃಷಿ ಪುರಸ್ಕೃತರಾದ ಶ್ರೀ ರಾಧಾಕೃಷ್ಣರವರು ಹಾಗೂ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಸುವಾಸಿನಿ ಹಾಗೂ ಅಬಕಾರಿ ನಿರೀಕ್ಷಕರಾದ ಎಮ್ ಮಂಜುನಾಥ್ ಹಾಗೂ ಚಿಂತಾಮಣಿ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಸಾರಿಕಾ ರವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಹಾಗೆ ಚಿಂತಾಮಣಿ ತಾಲೂಕಿನ ಎಲ್ಲಾ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ತಾಲೂಕಿನ ಪತ್ರಕರ್ತರು ಪ್ರಗತಿ ಬಂದು ಮತ್ತು ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು
