ಧಾರವಾಡ ಪ್ರಾದೇಶಿಕ ವಿಭಾಗದ ಧಾರವಾಡ ಜಿಲ್ಲೆಯ ಜಿಲ್ಲಾಮಟ್ಟದ ಗಾಂಧಿ ಸ್ಮೃತಿ ಮತ್ತು ಜಿಲ್ಲಾ ಜನಜಾಗೃತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಸಲಾಯಿತು. ಹುಬ್ಬಳ್ಳಿಯ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ,ಹುಬ್ಬಳ್ಳಿ-ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಸಂಗೊಳ್ಳಿ ರಾಯಣ್ಣ ನಗರದವರೆಗೆ ಜಾತಾ ಕಾರ್ಯಕ್ರಮ ಜಿಲ್ಲಾ ಜನಜಾಗೃತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಪಾನಮುಕ್ತರ ಅಭಿನಂದನಾ ಕಾರ್ಯಕ್ರಮ,ಗಾಂಧಿ ಸ್ಮೃತಿ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಅರವಿಂದ್ ಬೆಲ್ಲದ್ ಶಾಸಕರು ನೆರವೇರಿಸಿದರು. ಶ್ರೀಮನ್ಮಮಹಾರಾಜ ನಿರಂಜನ ಜಗದ್ಗುರು ದಿವ್ಯ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿ, ಶ್ರೀ ದುಗ್ಗೇಗೌಡ, ಶ್ರೀ ಸಂತೋಷ್ ಆರ್ ಶೆಟ್ಟಿ, ಶ್ರೀ ಪ್ರಭಾಕರ್ ನಾಯಕ್, ಶ್ರೀ ಸತೀಶ್ ನಾಯಕ,ಜಿಲ್ಲಾ ಪದಾಧಿಕಾರಿಗಳು, ಯೋಜನಾಧಿಕಾರಿಗಳು ಉಪಸ್ಥರಿದ್ದರು
