ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿಯಲ್ಲಿ ನಡೆದ 1591ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವನ್ನು ಶ್ರೀ ಎ. ಎಸ್. ಪಾಟೀಲ (ನಡಹಳ್ಳಿ ) ಮಾನ್ಯ ಶಾಸಕರು ಹಾಗೂ ಅಧ್ಯಕ್ಷರು ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತರವರು ಉದ್ಘಾಟನೆ ಮಾಡಿದರು. ನವಜೀವನ ಸಮಿತಿ ಸದ್ಯಸರಿಗೆ ದಾಖಲಾತಿ ಹಸ್ತಾಂತರ ಜನಜಾಗೃತಿ ವೇದಿಕೆಯ ನೂತನ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ರಾಜಣ್ಣ ಕೊರವಿಯವರು ವಿತರಿಸಿದರು. ಇವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಮುದ್ದೇಬಿಹಾಳ್ / ತಾಳಿಕೋಟಿ ಮತ್ತು ವ್ಯವಸ್ಥಾಪನಾ ಸಮಿತಿ ತಾಳಿಕೋಟಿ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಾಸುದೇವ ಎಸ್, ಹೇಬಸೂರು ವಹಿಸಿದ್ದರು. ಕಾರ್ಯಕ್ರಮ ಮುಖ್ಯಅತಿಥಿ ಯಾಗಿ ಆಗಮಿಸಿದ ಶ್ರೀ ಗಣೇಶಮರಾಠೆ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ವಿಜಯಪುರ, ಕಾರ್ಯಕ್ರಮದಲ್ಲಿ 1591ನೇ ಮದ್ಯವರ್ಜನ ಶಿಬಿರದ ಉಪಾಧ್ಯಕ್ಷರು ಗೌರವ ಸಲಹೆಗಾರರು , ಕಾರ್ಯಕಾರಿ ಮಂಡಳಿಯ ಸರ್ವ ಸದಸ್ಯರು , ಗಣೇಶನಗರ ವಲಯದ ಮೇಲ್ವಿಚಾರಕರಾದ ಕುಮಾರಿ ನೇತ್ರಾವತಿ,ತಾಳಿಕೋಟಿ ವಲಯದ ಮೇಲ್ವಿಚಾರಕರಾದ ಶ್ರೀ ಸಾಬಣ್ಣ, ತಾಳಿಕೋಟಿ / ಗಣೇಶನಗರ ವಲಯದ ಸೇವಾಪ್ರತಿನಿಧಿಗಳು ಸುವಿಧಾ ಸಹಾಯಕರು, ಒಕ್ಕೂಟದ ಪದಾಧಿಕಾರಿಗಳು, ನವಜೀವನ ಸಮಿತಿ ಸದ್ಯಸರು, ಮಾಧ್ಯಮ ಮಿತ್ರರು ಕಲ್ಬುರ್ಗಿ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿಯ ವಿಭಾಗದ ಯೋಜನಾಧಿಕಾರಿಗಳಾದ ಶ್ರೀ ರಾಜೇಶ್, / ಮೇಲ್ವಿಚಾರಕರು, ಮತ್ತು ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ವಿಭಾಗ ಯೋಜನಾಧಿಕಾರಿ ಯಾದ ಶ್ರೀ ಮಾಧವ ನಾಯಕ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಧಿಕಾರಿಯಾದ ಶ್ರೀ ನಂದಕುಮಾರ್ ಪಿ. ಪಿ., ಆರೋಗ್ಯ ಸಹಾಯಕರಾದ ಶ್ರೀಮತಿ ಜಯಲಕ್ಷ್ಮಿ, ಕೃಷಿ ಮೇಲ್ವಿಚಾರಕರಾದ ಶ್ರೀ ದೇವೇಂದ್ರ ಕರಿಗಾರ್ , ಮಿಣಜಿಗಿ ವಲಯದ ಮೇಲ್ವಿಚಾರಕರಾದ ಶ್ರೀ ವಿಶಾಲ ಮತ್ತು ತಾಳಿಕೋಟಿ ತಾಲೂಕಿನ ಸಾರ್ವಜನಿಕರು, ಅಡತ ಮರ್ಚೆಂಟ್ ಅಸೋಶಿಯೇಶನ್ಸ್ ಪದಾಧಿಕಾರಿಗಳು ಭಾಗವಹಿಸಿದರು.
