ಬೆಂಗಳೂರು ಪ್ರಾದೇಶಿಕ ವಿಭಾಗದ ದೇವನಹಳ್ಳಿ ತಾಲೂಕಿನ ಚಪ್ಪರದಕಲ್ಲು ಶ್ರೀ ಕೃಷ್ಟೋದಯ ಕಲ್ಯಾಣ ಮಂಟಪದಲ್ಲಿ 1590ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಇನ್ಸ್ಪೆಕ್ಟರ್ ವಿಶ್ವನಾಥಪುರ ಶ್ರೀ ನಾಗಪ್ಪ ಎನ್ ರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾ ನಿರ್ದೇಶಕರಾದ ಶ್ರೀ ಉಮರಬ್ಬ, ಜನ ಜಾಗೃತಿ ವೇದಿಕೆ ಸದಸ್ಯರಾದ ಶ್ರೀ ಬಲಮುರಿ ಶ್ರೀನಿವಾಸ್, ವಿ ಎಂ ನರಸಿಂಹರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಕಲ್ಪನಾ ನಾರಾಯಣಸ್ವಾಮಿ, ಶ್ರೀಮತಿ ಗೌರಮ್ಮ, ಹಾಗೂ ಸಮಿತಿಯ ಉಪಾಧ್ಯಕ್ಷರು ಗೌರವ ಸಲಹೆಗಾರರು ಭಾಗವಹಿಸಿದ್ದರು. ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ತಾಲೂಕು ಯೋಜನಾಧಿಕಾರಿಗಳಾದ ರವಿರಾಜ್ ನಾಯಕ್ ರವರು ಸ್ವಾಗತಿಸಿದರು. ಶಿಬಿರಾಧಿಕಾರಿ ವಿದ್ಯಾಧರ್, ಕುಮಾರ್, ಆರೋಗ್ಯಕ್ಕೆ ಶ್ರೀಮತಿ ಪಿಲೋಮಿನ, ಜವಾಬ್ದಾರಿ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ನವ ಜೀವನ ಸಮಿತಿ ಸದಸ್ಯರು, ಶಿಬಿರಾರ್ಥಿ ಬಂಧುಗಳು ಉಪಸ್ಥಿತರಿದ್ದರು.
