ಗೋಕಾಕ್ /ಹಾವೇರಿ ಜಿಲ್ಲೆಯ ಪಾನಮುಕ್ತ ಸದಸ್ಯರಿಗೆ – ಸ್ವ ಉದ್ಯೋಗ ತರಬೇತಿ ಧಾರವಾಡ ಪ್ರಾದೇಶಿಕ ವಿಭಾಗದ ಹಾವೇರಿ ಹಾಗೂ ಗೋಕಾಕ್ ಜಿಲ್ಲೆಯ ಪಾನಮುಕ್ತ ಸದಸ್ಯರಿಗೆ ರುಡ್ಸೆಟ್ ಸಂಸ್ಥೆ ಧಾರವಾಡದಲ್ಲಿ ಹೈನುಗಾರಿಕೆ & ಕುರಿಸಾಕಾಣಿಕೆ ಸ್ವ- ಉದ್ಯೋಗ ತರಬೇತಿ ಆಯೋಜನೆ ಮಾಡಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಚಿಕ್ಕೋಡಿ, ಗೋಕಾಕ್, ಬೆಳಗಾವಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು ಮತ್ತು ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಎಸ್. ಟಿ. ಮುನವಳ್ಳಿ, ಶ್ರೀ ಮಾಲತೇಶ್ ಅಳಾಜೆ, ಶ್ರೀ ಸೋಮಶೇಖರ್ ಮಗದುಮ್, ಶ್ರೀ ವಿಠ್ಠಲ್ ಪೀಸೆ, ಚಿಕ್ಕೋಡಿ & ಗೋಕಾಕ್ ಜಿಲ್ಲಾ ನಿರ್ದೇಶಕರಾದ ಶ್ರೀ ಕೃಷ್ಣ. ಟಿ, ಶ್ರೀ ಕೇಶವ್ ದೇವಾಂಗ ರವರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರುಡ್ಸೆಟ್ ಸಂಸ್ಥೆ ನಿರ್ದೇಶಕರಾದ ಶ್ರೀ ಗವಿಸಿದ್ದಪ್ಪ, ಉಪನ್ಯಾಸಕರಾದ ಶ್ರೀ ಚನ್ನಪ್ಪ ದೇವಗಿರಿ, ಶ್ರೀ ಬಸವರಾಜ್ ಉಪಸ್ಥಿತರಿದ್ದರು.
