1581ನೇ ಮದ್ಯವರ್ಜನ ಶಿಬಿರದ ಕುಟುಂಬದಿನ ಕಾರ್ಯಕ್ರಮ ಹಾಗು ಸಮಾರೋಪ ಸಮಾರಂಭ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕೊಪ್ಪಳ ಪಶ್ಚಿಮ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಿಲ್ಲಾ ಜನಜಾಗೃತಿ ವೇದಿಕೆ ಕೊಪ್ಪಳ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಭಾಗ್ಯನಗರ ವಲಯ, ನಗರ ಪೊಲೀಸ್ ಠಾಣೆ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ದಾನಿಗಳು, ಸಾರ್ವಜನಿಕರು ಹಾಗೂ ನವಜೀವನ ಸಮಿತಿ ಸದಸ್ಯರು ಇವರುಗಳ ಸಂಯುಕ್ತ ಆಶ್ರಯದಲ್ಲಿ 1581ನೇ ಮದ್ಯವರ್ಜನ ಶಿಬಿರ ಮೋಚಿ ಕ್ಷೇಮಾಭಿವೃದ್ಧಿ ಸಮಾಜದ ಸಮುದಾಯ ಭವನ ಭಾಗ್ಯನಗರದಲ್ಲಿ ಇಂದು ಸಮಾರೋಪಗೊಂಡಿತು. ಪೂಜ್ಯ ಶ್ರೀ ಶಿವರಾಮ ಕೃಷ್ಣಾನಂದ ಭಾರತಿ ಮಹಾಸ್ವಾಮಿಗಳು ಶ್ರೀ ಶಂಕರಾಚಾರ್ಯಮಠ ಭಾಗ್ಯನಗರ ಇವರು ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು. ಶ್ರೀ ಗಣೇಶ್ ಬಿ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗ ಕೊಪ್ಪಳ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಸನ, ವಸನ, ವಸತಿ, ಆರೋಗ್ಯ ಇವು ನಾಲ್ಕು ಜೀವನದಲ್ಲಿ ಅತ್ಯವಶ್ಯಕವಾದದ್ದು. ಪಾನಮುಕ್ತರಾದ ತಾವುಗಳು ಈ ನಾಲ್ಕೂ ಸಂಗತಿಗಳನ್ನು ಅನುಭವಿಸುವವರಾಗುತ್ತೀರಿ. ಹಾಗಾಗಿ ಮದ್ಯವರ್ಜನ ಶಿಬಿರದಲ್ಲಿ ಭಾಗಿಯಾದ ತಾವುಗಳೆಲ್ಲರು ಅದೃಷ್ಠವಂತರು. ಮತ್ತು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕೊಪ್ಪಳ ಪ್ರಾದೇಶಿಕ ವಿಭಾಗದ ಮಾನ್ಯ ಯೋಜನಾಧಿಕಾರಿ ಶ್ರೀ ಮಾಧವ ನಾಯಕ್ ಇವರು 72 ಶಿಬಿರಾರ್ಥಿಗಳ ಕುಟುಂಬ ದಿನ ಸಮಾರಂಭವನ್ನು ನಡೆಸಿಕೊಟ್ಟರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ಶ್ರೀ ನಂದಕುಮಾರ್ ಪಿ ಪಿ ಇವರು ಸಮಾರೋಪ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಶಾರದಾ ರಾಘವೇಂದ್ರ ಅಧ್ಯಕ್ಷರು 1581ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಇವರು ವಹಿಸಿದ್ದರು. ಅತಿಥಿಯಾಗಿ ಶ್ರೀ ಸದಾನಂದ ಬಂಗೇರ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕೊಪ್ಪಳ ಇವರು ಮಾಹಿತಿ ನೀಡಿ ಶುಭವನ್ನು ಕೋರಿದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಯಮನಪ್ಪ ಕಬ್ಬೇರ್ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ಕೊಪ್ಪಳ, ಶ್ರೀ ಪ್ರಾಣೇಶ್ ಮಹೇಂದ್ರಕರ್ ಮಾಜಿ ನಗರಸಭೆ ಸದಸ್ಯರು ಕೊಪ್ಪಳ, ಶ್ರೀ ರಾಘವೇಂದ್ರ ಪಾನಘಂಟಿ ಹಿರಿಯ ನ್ಯಾಯವಾದಿಗಳು ಕೊಪ್ಪಳ, ಶ್ರೀ ಅಮರೇಶ್ ಕರಡಿ ಬಿಜೆಪಿ ಮುಖಂಡರು, ಶ್ರೀ ಮಹಾಂತೇಶ್ ಎಸ್ ಪಾಟೀಲ್ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ಕೊಪ್ಪಳ, ಶ್ರೀ ದಾನಪ್ಪ ಕವಲೂರು ಗೌರವಾಧ್ಯಕ್ಷರು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, lNNER ವಿಲ್ ಕ್ಲಬ್ ನ ಎಲ್ಲಾ ಸದಸ್ಯರು, ಶ್ರೀ ಸುರೇಶ್ ದರಗದಕಟ್ಟಿ ಮಾಜಿ ಪಟ್ಟಣ ಪಂಚಾಯತ್ ಸದಸ್ಯರು ಭಾಗ್ಯನಗರ, ಶ್ರೀ ಚಂದ್ರು ಉಂಕಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಭಾಗ್ಯನಗರ, ಶ್ರೀ ಗವಿಸಿದ್ದಪ್ಪ ಮಗಿಮಾವಿನಹಳ್ಳಿ ಪಟ್ಟಣ ಪಂಚಾಯತ್ ಸದಸ್ಯರು ಭಾಗ್ಯನಗರ, ಶ್ರೀ ಸಿದ್ದಪ್ಪ ಯಮನಪ್ಪ ಹೊಸ್ಕೇರಿ ಗ್ರಾಮ ಪಂಚಾಯತ್ ಸದಸ್ಯರು ಚಿಲವಾಡಗಿ, ಶ್ರೀಮತಿ ತ್ರಿಶಾಲ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಕೊಪ್ಪಳ, ಶ್ರೀಮತಿ ಸುನಂದ ಪಂಡಿತ್ ನಿವೃತ್ತ ಉಪನ್ಯಾಸಕರು, ಶ್ರೀಮತಿ ಶಾರದಾ ಮಂಜುನಾಥ ತಾವರಗೇರ ಸಹ ಕಾರ್ಯದರ್ಶಿ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಶ್ರೀ ಯಮನೂರಪ್ಪ ಹಾದಿಮನಿ, ಕೋಶಾಧಿಕಾರಿ 1581ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹಾಗೂ ಬಿಜೆಪಿ ಯುವ ಮುಖಂಡರು ಭಾಗ್ಯನಗರ, ಇವರುಗಳು ಉಪಸ್ಥಿತರಿದ್ದು ನವಜೀವನ ಕುಟುಂಬಕ್ಕೆ ಶುಭವನ್ನು ಹಾರೈಸಿದರು. ಸೇವಾಪ್ರತಿನಿಧಿಗಳು ಭಾಗ್ಯನಗರ ವಲಯ, ಒಕ್ಕೂಟದ ಪದಾಧಿಕಾರಿಗಳು ಭಾಗ್ಯನಗರ ವಲಯ, ಸ್ವ-ಸಹಾಯ ಸಂಘದ ಸದಸ್ಯರು, ನವಜೀವನ ಸಮಿತಿ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.ಶ್ರೀ ಜಗದೀಶ್ ಕೆ.ಹೆಚ್ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕೊಪ್ಪಳ ಪಶ್ಚಿಮ ಇವರು ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿ, ಶ್ರೀಮತಿ ಲಕ್ಷ್ಮಿ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಭಾಗ್ಯನಗರ ವಲಯ ಇವರು ಧನ್ಯವಾದ ಗೈದರು.