ಶಿವಮೊಗ್ಗ ಜನಜಾಗೃತಿ ವೇದಿಕೆಯ 2ನೇ ತ್ರೈಮಾಸಿಕ ಸಭೆ

Janajagurthi Vedike News

ಶಿವಮೊಗ್ಗ ಜನಜಾಗೃತಿ ವೇದಿಕೆಯ 2ನೇ ತ್ರೈಮಾಸಿಕ ಸಭೆಯು ಜಿಲ್ಲಾ ವೇದಿಕೆಯ ಅಧ್ಯಕ್ಷರಾದ ಶ್ರೀ ಆನಂದ್ ರವರು ಮತ್ತು ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಬಿ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. 3 ತಿಂಗಳ ತ್ರೈಮಾಸಿಕ ಸಾಧನ ವರದಿಯನ್ನು ತಾಲೂಕುವಾರು ಮಂಡಿಸಿದರು. ಈ ವರ್ಷದ ಕ್ರಿಯಾ ಯೋಜನೆಯ ಪ್ರಕಾರ ನಡೆಯಬೇಕಾದ ಮದ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ, ನವಜೀವನೋತ್ಸವ, ಅಕ್ಟೋಬರ್ 2 ಗಾಂಧಿ ಜಯಂತಿ ಕಾರ್ಯಕ್ರಮ, ಅಧಿಕಾರಿ ವರ್ಗದವರ ವಿಶೇಷ ಸಭೆಯಲ್ಲಿ ಆದ ಪರಿಣಾಮಗಳ ಬಗ್ಗೆ ಚರ್ಚಿಸಲಾಯಿತು. ಹೊಸ ಸದಸ್ಯರ ಸೇರ್ಪಡೆ ಬಗ್ಗೆ ಚರ್ಚಿಸಲಾಯಿತು. ಜಿಲ್ಲಾ ಕಾರ್ಯದರ್ಶಿಗಳು, ಸಭೆಯಲ್ಲಿ ಜಿಲ್ಲಾ ವೇದಿಕೆ ಸದಸ್ಯರು, ಯೋಜನಾಧಿಕಾರಿಗಳು, ಪ್ರಾದೇಶಿಕ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.