1580 ನೇ ಸಮುದಾಯ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ

Janajagurthi Vedike News

ಕುವೆಂಪುನಗರ ಧರ್ಮಸ್ಥಳ ಸಂಸ್ಥೆಯ ಕೆಲಸ ಶ್ಲಾಘನೀಯ: ಮಧ್ಯ ವ್ಯಸನವೆಂಬುದು ವ್ಯಕ್ತಿಯನ್ನು ಮಾತ್ರ ಸರ್ವನಾಶ ಮಾಡುವುದಲ್ಲ ಕುಟುಂಬ ಹಾಗೂ ಸಮಾಜವನ್ನು ವಿನಾಶದ ಕಡೆಗೆ ತಲ್ಲುತ್ತದೆ.. ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಅಲೋಲಕಲ್ಲೋಲ ಮಾಡುವುದರ ಜೊತೆಗೆ ಸಮಾಜದಲ್ಲಿ ನಿಕೃಷ್ಟ ವ್ಯಕ್ತಿಯಾಗುವಂತೆ ಮಾಡುತ್ತದೆ.. ಪೂಜ್ಯ ಧರ್ಮಸ್ಥಳದ ಹೆಗ್ಗಡೆಯವರು ಈ ನೆಲೆಯಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಕನಸನ್ನು ಕಂಡು ಹಲವಾರು ವ್ಯಸನಿಗಳ ಪಾಲಿಗೆ ಬೆಳಕು ನೀಡಿದ್ದಾರೆ ಇಲ್ಲಿಯ ತನಕ 1580 ಮಧ್ಯವರ್ಜಿನ ಶಿಬಿರ ನಡೆಸಿ ಒಂದುವರೆ ಲಕ್ಷಕ್ಕೂ ಮಿಕ್ಕಿದ ಮಂದಿಗೆ ಹೊಸ ಬದುಕು ನೀಡಿದ್ದಾರೆ ಎಂದರೆ ಧರ್ಮಸ್ಥಳದ ಸಂಸ್ಥೆಯ ಕೆಲಸ ಶ್ಲಾಘನೀಯ ಎಂದು ವರುಣ ಕ್ಷೇತ್ರದ ಶಾಸಕರಾದ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯರವರು ಇಂದು ಬಣ್ಣಿಸಿ, ಪೂಜ್ಯರನ್ನು ಅಭಿನಂದಿಸಿ ಕಡಕೋಳದ ಜೈನಮಂದಿರದಲ್ಲಿ ನಡೆದ ಮಧ್ಯವರ್ತಿನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು
ಮೈಸೂರು ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ ರವರು ಕೌಟುಂಬಿಕ ಜೀವನದ ವಿಚಾರಗಳನ್ನು ಬುಡಮೇಲು ಮಾಡುವ ಒಂದೇ ಒಂದು ಪದಾರ್ಥ ಎಂದರೆ ಅದು ದುಶ್ಚಟಗಳು ಅದರಲ್ಲಿಯೂ ಮದ್ಯಪಾನ ಮೊದಲ ಮೆಟ್ಟಿಲು ಎಂದರಲ್ಲದೆ ನವ ಜೀವನ ಸಮಿತಿಯ ಸದಸ್ಯರಿಗೆ ಮತ್ತು ಅವರ ಮನೆಯವರಿಗೆ ಹಾಗೂ ಮೆರೆದ ಸಭಿಕರಿಗೆ ಸಂದರ್ಭೋಚಿತವಾಗಿ ಮಾರ್ಗದರ್ಶನ ನೀಡಿದರು,ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ವಿ ರಾಮಸ್ವಾಮಿಯವರು ಕ್ಷೇತ್ರದ ಹಾಗೂ ಯೋಜನೆಯ ಕಾರ್ಯಕ್ರಮಗಳ ಕುರಿತು, ವೈಯಕ್ತಿಕ ವಿಚಾರಧಾರೆಗಳನ್ನು ಶಿಬಿರಾರ್ಥಿಗಳ ಮುಂದೆ ತೆರೆದಿಟ್ಟು ನಿಮ್ಮ ಪಾಲಿಗೆ ಮಧ್ಯವರ್ತಿನ ಶಿಬಿರ ಭಾಗ್ಯದ ಬಟ್ಟಲು ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು, ಮೈಸೂರು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಹಂದನ ಹಳ್ಳಿ ಸೋಮಶೇಖರ್ ಸಂದರ್ಭೋಚಿತವಾಗಿ ಮಾತನಾಡಿದರು, ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರವಿಯವರು ಶಿಬಿರದ ಅನುಭವವನ್ನು ಹಂಚಿಕೊಂಡು ನನ್ನ ಪಾಲಿಗೆ ಸಿಕ್ಕಿದ ಪುಣ್ಯದ ಕೆಲಸಕ್ಕೆ ಆಭಾರಿಯಾಗಿದ್ದೇನೆ ಎಂದರು, ಈ ಸಂದರ್ಭ ಜಿಲ್ಲಾ ನಿರ್ದೇಶಕರಾದ ಲಕ್ಷ್ಮಣ್ ಎಂ, ಜನಜಾಗೃತಿ ವೇದಿಕೆಯ ಸದಸ್ಯರುಗಳು, ಯೋಜನಾಧಿಕಾರಿ ಶ್ರೀಮತಿ ಶಕುಂತಲಾ, ಭಾಸ್ಕರ್, ಮೇಲ್ವಿಚಾರಕ ಪ್ರವೀಣ್ ಹಾಗೂ ಇತರರು ಉಪಸ್ಥಿತರಿದ್ದರು.