1567 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ

Janajagurthi Vedike News

ಮದ್ಯ ವ್ಯಸನಿಗಳ ಕುಟುಂಬದಲ್ಲಿ ಹೊಸ ಬೆಳಕನ್ನು ಮೂಡಿಸುತ್ತಿರುವ ಧರ್ಮಸ್ಥಳದ ಪೂಜ್ಯ ಡಿ.ವೀರೇಂದ್ರ ಹೆಗ್ಗಡೆಯವರ ಮದ್ಯವರ್ಜನ ಶಿಬಿರ – ಮಾಜಿ ಮುಖ್ಯಮಂತ್ರಿ ಶ್ರೀ ವೀರಪ್ಪ ಮೊಯ್ಲಿ. ಬೆಂಗಳೂರು ಪ್ರಾದೇಶಿಕ ವಿಭಾಗದ ನೆಲಮಂಗಲ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ನಡೆಯುತ್ತಿರುವ 1567ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ವೀರಪ್ಪ ಮೊಯ್ಲಿಯವರು ಉದ್ಘಾಟಿಸಿ ಮಾಹಿತಿ ಮಾರ್ಗದರ್ಶನ ನೀಡಿದರು. ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ವಿ. ರಾಮಸ್ವಾಮಿಯವರು, ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ .ಎಂ ರವರು, ಪಿಎಲ್‌ಡಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಶ್ರೀ ತಿಮ್ಮರಸಯ್ಯರವರು, ಜಿ.ಜೆ ಮೂರ್ತಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಶ್ರೀ ಡಿ.ಸಿ ಗಂಗಾಧರ್, ಜಿಲ್ಲಾ ನಿರ್ದೇಶಕರು ಶ್ರೀ ಉಮರಬ್ಬ, ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಯೋಜನಾಧಿಕಾರಿ ಶ್ರೀಮತಿ ಸುಜಾತ, ಜಿಲ್ಲಾ ಉಪಾಧ್ಯಕ್ಷರು ಶ್ರೀಮತಿ ವೀಣಾ ರಮೇಶ್, ಶಿಬಿರಾಧಿಕಾರಿ ರಾಜೇಶ್, ಆರೋಗ್ಯ ಸಹಾಯಕ ವೆಂಕಟೇಶ್, ಮೇಲ್ವಿಚಾರಕರು ಶ್ರೀಮತಿ ಅನಿತಾ, ಅನಿಲ್, ಸೇವಾ ಪ್ರತಿನಿಧಿಗಳು, ಸಮಿತಿಯ ಸದಸ್ಯರು, ನಮ್ಮ ಜೀವನ ಸದಸ್ಯರು ಉಪಸ್ಥಿತರಿದ್ದರು