1565 ನೇ ಸಮುದಾಯ ಮದ್ಯವರ್ಜನ ಶಿಬಿರದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಕುಟುಂಬ ದಿನ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, 1565ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕುರುಬರಹಳ್ಳಿ, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಆಲನಹಳ್ಳಿ ವಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಡಾll.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾll.ಹೇಮಾವತಿ.ವಿ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ಮೈಸೂರು ತಾಲೂಕಿನ ಆಲನಹಳ್ಳಿ ವಲಯದ ಕುರುಬರಹಳ್ಳಿ ಗ್ರಾಮದ ಕನಕ ಸಮುದಾಯ ಭವನದಲ್ಲಿ 1565ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೌರವಾನ್ವಿತ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾl.ಎಲ್.ಹೆಚ್ ಮಂಜುನಾಥ್ ಸರ್ ರವರು ನೆರವೇರಿಸಿ ಮಾತನಾಡಿ ಪರಿವರ್ತನೆ ಎಂಬುದು ಜಗದ ನಿಯಮ. ಈ ಪ್ರಪಂಚದಲ್ಲಿ ಏನಾದರೂ ಶಾಶ್ವತವಾಗಿ ಇದೆ ಅನ್ನುವುದಾದರೆ ಅದು ಬದಲಾವಣೆ ಮಾತ್ರ. ಮದ್ಯಪಾನವನ್ನು ಬಿಡುವ ಪ್ರಥಮ ದಾರಿಯೆಂದರೆ ಮನೆಯಲ್ಲಿ ಇರುವಂತಹ ಗುರುಹಿರಿಯರಿಗೆ ಗೌರವ ಕೊಡುವುದು. ಮತ್ತೊಂದು ದಾರಿ ನಮ್ಮ ಮನೆದೇವರು ಗ್ರಾಮದೇವರು ಹಾಗೂ ಊರಿನ ದೇವರನ್ನು ಆರಾಧಿಸುವುದು. ದಾಂಪತ್ಯ ಜೀವನದ ಹಾಗೂ ಕೌಟುಂಬಿಕ ಸಾಮರಸ್ಯದ ಕುರಿತು ಅರ್ಥ ಗರ್ಭಿತ ಮಹತ್ವವನ್ನು ತಿಳಿಸಿ, ಮನುಷ್ಯನ ಜೀವನದಲ್ಲಿ ಬರುವ ಅಭಿಮಾನ ಸ್ವಾಭಿಮಾನ ಮತ್ತು ಅಹಂಕಾರ ಈ ಮೂರು ಸ್ತರಗಳನ್ನು ಉಲ್ಲೇಖಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ.ಶ್ರೀ.ಶ್ರೀ ಅರುಣ್ ಸಿದ್ದೇಶ್ವರ ಮಹಾಸ್ವಾಮಿಗಳು ಕಾಗಿನೆಲೆಮಠ ಕೆ.ಆರ್ ನಗರ ಇವರು ವಹಿಸಿದ್ದರು.ವೇದಿಕೆಯಲ್ಲಿ ಕೆ.ಆರ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ ಶ್ರೀ ರಾಮ್ ದಾಸ್, ಕೆ.ಆರ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಸೋಮಶೇಖರ್, ಮಾಜಿ ಮೂಢ ಅಧ್ಯಕ್ಷರಾದ ಶ್ರೀ ರಾಜೀವ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಕೇಬಲ್ ಕೃಷ್ಣ, ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರುಗಳಾದ ಶ್ರೀ ಪಿ.ಗಂಗಾಧರ ರೈ ಮತ್ತು ಶ್ರೀ ಜಯರಾಮ ನೆಲ್ಲಿತ್ತಾಯ, ಹಾಗೂ ಮೈಸೂರು ಜಿಲ್ಲಾ ನಿರ್ದೇಶಕರಾದ ಶ್ರೀ ಲಕ್ಷ್ಮಣ್.ಎಂ ಇವರುಗಳು ಉಪಸ್ಥಿತರಿದ್ದರು.