ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆಯುತ್ತಿರುವ 1559ನೇ ಮದ್ಯವರ್ಜನ ಶಿಬಿರದ ಉದ್ಘಾಟನೆಯನ್ನು ತಲಮಕ್ಕಿಯ ಪ್ರಗತಿಪರ ಕೃಷಿಕರಾದ ಯೆಚ್. ವಿ. ದಯಾನಂದ್ರವರು ಉದ್ಘಾಟಿಸಿದರು. ಸಮಾರಂಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಭಟ್, ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್, ಕನ್ನಡ ಜಾನಪದ ಪರಿಷತ್ ಕೊಪ್ಪ ತಾಲೂಕಿನ ಗೌರವ ಅಧ್ಯಕ್ಷರಾದ ಎಲ್. ಎಂ. ಪ್ರಕಾಶ್ ಕೌರಿ, ತಾಲೂಕ್ ಯೋಜನಾಧಿಕಾರಿಗಳು, ಜನಜಾಗೃತಿ ಯೋಜನಾಧಿಕಾರಿಗಳು, ಶಿಬಿರಾಧಿಕಾರಿಗಳು, ಆರೋಗ್ಯ ಸಹಾಯಕಿ, ಮೇಲ್ವಿಚಾರಕರು, ಸೇವಾಪ್ರತಿನಿದಿಗಳು ನವಜೀವನ ಸದಸ್ಯರು, ವಿಪತ್ತು ನಿರ್ವಹಣ ಘಟಕದವರು ಇದ್ದರು. ಒಟ್ಟು 60 ಶಿಬಿರಾರ್ಥಿಗಳ ನೋಂದಾವಣೆ ಮಾಡಲಾಯಿತು.
