ದಾವಣಗೆರೆ ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ

Janajagurthi Vedike News

ದಾವಣಗೆರೆ ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯು ಜಿಲ್ಲಾಧ್ಯಕ್ಷರಾದ ಶ್ರೀ ನಾಗರಾಜ್ ಕಾಕನುರು ರವರ ಅಧ್ಯಕ್ಷತೆಯಲ್ಲಿ ಯೋಜನೆಯ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ 2022-23ರ ಕ್ರಿಯಾ ಯೋಜನೆಯ ಮದ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ತಂಬಾಕು ವಿರೋಧಿ ದಿನ, ಮಾದಕ ವಸ್ತು ವಿರೋಧಿ ದಿನ, ನವಜೀವನ ಸಮಿತಿ ಬಲವರ್ಧನೆ, ಪುನಶ್ಚೇತನ ಮಾಡುವ ಬಗ್ಗೆ, ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಪಡಕೊಂಡ ಸಂಪನ್ಮೂಲ ವ್ಯಕ್ತಿಗಳ ಕಾರ್ಯ ಚಟುವಟಿಕೆ, ಹೊಸ ಸಂಪನ್ಮೂಲ ವ್ಯಕ್ತಿಗಳಿಗೆ 2 ತರಬೇತು ಕಾರ್ಯಕ್ರಮ, ಕಾರ್ಯಕ್ರಮಗಳ ಅನುಷ್ಠಾನ, ಹಕ್ಕೊತ್ತಾಯ ಕಾರ್ಯಕ್ರಮ, ಪ್ರತಿ 3 ತಿಂಗಳಿಗೊಮ್ಮೆ ಬೈಲಾ ಪ್ರಕಾರ ಜನಜಾಗೃತಿ ವೇದಿಕೆಯ ಸಭೆ ನಡೆಸುವ ಬಗ್ಗೆ ಪ್ರಾದೇಶಿಕ ನಿರ್ದೇಶಕರು ಮಾರ್ಗದರ್ಶನ ನೀಡಿದರು. ಜಿಲ್ಲಾ ವೇದಿಕೆಗೆ ಸದಸ್ಯರನ್ನು ಸೇರಿಸುವ ಬಗ್ಗೆ, ಪ್ರತಿ ಯೋಜನಾ ಕಛೇರಿಗೆ 5ರಂತೆ ಸದಸ್ಯರ ವೇದಿಕೆಗೆ ಒಪ್ಪಿಗೆ ಪಡಕೊಂಡು ನೋಂದಾವಣೆ ಮಾಡುವ ಬಗ್ಗೆ, ಈ ತ್ರೈಮಾಸಿಕದಲ್ಲಿ ನಡೆಯುವ ಶಿಬಿರದ ಬಗ್ಗೆ, ಕಾರ್ಯಕರ್ತರು ವೇದಿಕೆ ಸದಸ್ಯರ ಜೊತೆ ನಿಕಟವಾದ ಸಂಪರ್ಕ ಇಟ್ಟುಕೊಳ್ಳುವಂತೆ ಕಾರ್ಯಕ್ರಮಕ್ಕೆ ಅವರನ್ನು ಅಮಂತ್ರಿಸುವಂತೆ ಚಿತ್ರದುರ್ಗ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ ಮೇಡಂ ಅಭಿಪ್ರಾಯ ಪಟ್ಟರು. ಶತದಿನ ಕಾರ್ಯಕ್ರಮದ ಬಗ್ಗೆ, ನವಜೀವನ ಸಮಿತಿ ಸದಸ್ಯರ ಅನುಪಾಲನೆ, ಮತ್ತು ವೇದಿಕೆ ಸದಸ್ಯರಿಗೆ ಇದ್ದ ಗೊಂದಲಗಳ ಬಗ್ಗೆ ಮಾರ್ಗದರ್ಶನ ನೀಡಿದರು. ವೇದಿಕೆಯ ಸದಸ್ಯರ ಅಭಿಪ್ರಾಯ ಅನಿಸಿಕೆ ವ್ಯಕ್ತ ಪಡಿಸಿದರು. ಸಭೆಯಲ್ಲಿ ನಿಕಟ ಪೂರ್ವ ಅದ್ಯಕ್ಷರು ಸುರೇಶ್ ಹೋಸ್ಕೆರಿ, ವೇದಿಕೆಯ ಉಪಾಧ್ಯಕ್ಷರು, ಜಿಲ್ಲಾ ವೇದಿಕೆ ಎಲ್ಲಾ ಸದಸ್ಯರು, ಜಿಲ್ಲಾ ಕಾರ್ಯದರ್ಶಿಗಳು, ಯೋಜನಾಧಿಕಾರಿಗಳು, ಜನಜಾಗೃತಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.