ಯಲಬುರ್ಗಾ ತಾಲೂಕಿನ ತಳಕಲ್ ಸಮುದಾಯ ಭವನದಲ್ಲಿ ನವಜೀವನೋತ್ಸಾಹ ಮತ್ತು ಮಂಜುನಾಥ ಸ್ವಾಮಿಯ ಪೂಜಾ ಕಾರ್ಯಕ್ರಮ

Janajagurthi Vedike News

ಕೊಪ್ಪಳ ಪ್ರಾದೇಶಿಕ ವಿಭಾಗದ ಯಲಬುರ್ಗಾ ತಾಲೂಕಿನ ತಳಕಲ್ ಸಮುದಾಯ ಭವನದಲ್ಲಿ ನವಜೀವನೋತ್ಸಾಹ ಮತ್ತು ಮಂಜುನಾಥ ಸ್ವಾಮಿಯ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಗ್ರಾಮದ ಒಟ್ಟು 73ಮಂದಿ ನವಜೀವನ ಸದಸ್ಯರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ನವಜೀವನ ಸಮಿತಿಯ ಸದಸ್ಯರು ಬರಿಸಿರುತ್ತಾರೆ .ಕಾರ್ಯಕ್ರಮಕ್ಕೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರಾಕೇಶ್ ಪಿಡಿಒ ಶ್ರೀ ಆನಂದ್ ಎಲಿಗಾರ್.ನವಜೀವನ ಅಧ್ಯಕ್ಷ ಷಣ್ಮುಖಯ್ಯ .ಯೋಜನಾಧಿಕಾರಿ ಸತೀಶ್. ಮಾಧವ ನಾಯ್ಕ ಮೇಲ್ವಿಚಾರಕರು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು .ನವಜೀವನ ಸದಸ್ಯರ ಈ ಪರಿವರ್ತನೆಯಿಂದ ಯಲಬುರ್ಗ ತಾಲ್ಲೂಕಿನಲ್ಲಿ ವಿಶೇಷವಾದ ಜಾಗೃತಿ ಮತ್ತು ಸಹಕಾರ ಜನರಿಂದ ಲಭಿಸುತ್ತಿದೆ.