ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1524 ನೇ ಶಿಬಿರವನ್ನು ಶಿರಹಟ್ಟಿಯ ಫಕ್ಕೀರೇಶ್ವರ ಮಠದಲ್ಲಿ ಇಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಗಂಗಮ್ಮ ಉದ್ಘಾಟನೆ ಮಾಡಿ ಶುಭಹಾರೈಸಿದರು ಜಿಲ್ಲಾ ನಿರ್ದೇಶಕರಾದ ಶಿವಾನಂದ ಆಚಾರ್ಯ ಮಾಹಿತಿ ನೀಡುತ್ತಾ ಕುಡಿತ ಒಂದು ಸಾಮಾಜಿಕ! ಅಂಟುರೋಗ ಇದನ್ನು ಸ್ವಾಭಿಮಾನದಿಂದ ತ್ಯಜಿಸಿದಾಗ ಕುಟುಂಬದಲ್ಲಿ ನೆಮ್ಮದಿ ಸುಲಭ ಸಾಧ್ಯ ಎಂದರು ಪೂಜ್ಯ ವೀರೇಂದ್ರ ಹೆಗ್ಗಡೆಯವರು 1524ನೇ ಶಿಬಿರವನ್ನು ಮಾಡಿ ಸುಮಾರು 1,50,000/- ಸದಸ್ಯರನ್ನು ಕುಡಿತ ಬಿಡಿಸಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಅಂತೆಯೇ ಈ ಶಿಬಿರದಲ್ಲಿ 60 ಶಿಬಿರಾರ್ಥಿಗಳನ್ನು ನೊಂದಾವಣೆ ಮಾಡಿದ್ದು ಧರ್ಮಸ್ಥಳದ ಶಕ್ತಿ ಮತ್ತು ಫಕೀರೇಶ್ವರ ಸ್ವಾಮಿಯ ಆಶೀರ್ವಾದ ,ಕುಟುಂಬ ಉತ್ತಮವಾಗಿ ನಡೆಯುತ್ತದೆ ಎಂದು ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹುಮಾಯನ್ ಮಾಗಡಿ ಮಾತನಾಡಿ ಹೆಗಡೆಯವರ ಸಾಮಾಜಿಕ ಮತ್ತು ಈ ರೀತಿಯ ಜಾಗೃತಿ ಕಾರ್ಯ ಮಾಡುತ್ತಿರುವುದು ಅದರಲ್ಲಿಯೂ ನಮ್ಮ ಶಿರಹಟ್ಟಿ ಭಾಗದಲ್ಲಿ ಅನೇಕ ದುಶ್ಚಟಕ್ಕೆ ಬಲಿಯಾದ ಕುಟುಂಬಗಳು ನಾಶವಾಗುತ್ತಿದ್ದು ಶಿಬಿರದ ಮುಖಾಂತರ ಸಮಾಜದ ಏಳಿಗೆಗೆ ಸ್ಪಂದಿಸುತ್ತಿರುವ ಅಭಿವೃದ್ಧಿ ಯೋಜನೆಗೆ ಅನಂತಾನಂತ ಧನ್ಯವಾದಗಳು ಎಂದು ತಿಳಿಸಿದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು A K ಬಳಿಗೆರ ವಹಿಸಿದ್ದು ಮುಖ್ಯ ಅತಿಥಿಗಳಾಗಿ ನೂರ್ ಸೆಟ್ಟರ್ ಮತ್ತು ಯೋಜನಾಧಿಕಾರಿ ಮಾಧವ ನಾಯಕ್ ಕ್ಷೇತ್ರ ಯೋಜನಾಧಿಕಾರಿಗಳು ಶಿವಣ್ಣ ಎಸ್ ಫಕೀರೇಶ ರಟ್ಟಿಹಳ್ಳಿ ಮಹಾಂತೇಶ ದಶಮನಿ ಶಿಬಿರಾಧಿಕಾರಿ ನಾಗರಾಜ್ ಮೇಲ್ವಿಚಾರಕರಾದ ಗಜೇಂದ್ರ ತಾಲೂಕಿನ ಉಳಿದೆಲ್ಲಾ ಮೇಲ್ವಿಚಾರಕರು ಮತ್ತು ವಲಯದ ಸೇವಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
