ಧಾರವಾಡ ಪ್ರಾದೇಶಿಕ ವಿಭಾಗದ ಚಿಕ್ಕೋಡಿ ಜಿಲ್ಲಾ ಯೋಜನಾವ್ಯಾಪ್ತಿಯ ಅಥಣಿ ತಾಲೂಕಿನ ರಡ್ಡರಹಟ್ಟಿಯ ಬಸವೇಶ್ವರ ಸಭಾಭವನದಲ್ಲಿ 1520ನೇ ಶಿಬಿರದ ಕುಟುಂಬ ದಿನ – ಸಮಾರೋಪ ಸಮಾರಂಭ ಕಾರ್ಯಕ್ರಮ ನೆಡೆಸಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಎಸ್. ಟಿ ಮುನವಳ್ಳಿ, ಕೃಷ್ಣ. ಟಿ. ನಿರ್ದೇಶಕರು, ಸಮಿತಿಯ ಅಧ್ಯಕ್ಷರಾದ ಬಿ. ಏನ್. ಖೋತ್, ರಾ. ರೈ. ಸಂ. ಗೌರವ ಅಧ್ಯಕ್ಷರು ಶಶಿಕಾಂತ್ ಪಡಸಲಾಗಿ,ಗ್ರಾ. ಪ. ಅಧ್ಯಕ್ಷರು ಬಸವ್ವ ಲಕ್ಕಪ್ಪ ನಾಯಕ್, ಯೋಗ ಶಿಕ್ಷಕರು, ಯೋಜನಾಧಿಕಾರಿ ರಾಜು ನಾಯಕ್, ನಾಗೇಶ್ ವೈ.ಎ, ಶಿಬಿರಧಿಕಾರಿ ದಿವಾಕರ್ ಪೂಜಾರಿ, ಕು. ರಂಜಿತಾ ಜನಜಾಗೃತಿ ಸದಸ್ಯರು ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 84 ಶಿಬಿರಾರ್ಥಿಗಳಿಗೆ ವ್ಯಸನ ಮುಕ್ತರಾಗಲು ಚಿಕಿತ್ಸೆ ನೀಡಲಾಗಿದ್ದು, ಶಿಬಿರದಲ್ಲಿ ಎಲ್ಲಾ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ಸಂಯೋಜನೆ ಆಗಿದ್ದು ನವಜೀವನ ಸದಸ್ಯರ ವಿಶೇಷ ಸಹಕಾರದಿಂದ ಉತ್ತಮವಾಗಿ ನೆಡೆಸಲಾಯಿತು.
