ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬಿಜ್ಜಳ್ಳಿ ವಲಯದ ಕಳ್ಳಿ ಗೆದ್ದೇ ಗ್ರಾಮದಲ್ಲಿ ನವಜೀವನ ಸಮಿತಿ ಸದಸ್ಯರ ವತಿಯಿಂದ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ನವ ಜೀವನೋತ್ಸವ ಕಾರ್ಯಕ್ರಮ ಈ ಸಭೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ಸರ್, ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಯಾಗಿ ತಿಮ್ಮಯ್ಯ ನಾಯಕ್ ಸರ್, ತೀರ್ಥಹಳ್ಳಿ ತಾಲೂಕಿನ ಯೋಜನಾಧಿಕಾರಿಯಾಗಿ ಶ್ರೀಮತಿ ಹೇಮಲತಾ ಮೇಡಂ, ಕಳ್ಳಿ ಗದ್ದೆ ಗ್ರಾಮದ ಗ್ರಾಮ್ ಪಂಚಾಯಿತಿ ಅಧ್ಯಕ್ಷರು, ಪಿಡಿಒ, ಒಕ್ಕೂಟದ ಅಧ್ಯಕ್ಷರು, ಬಿಜ್ಜವಳ್ಳಿವಲಯದ ಮೇಲ್ವಿಚಾರಕರು, ಪೋಷಕರು, ತಾಲೂಕಿನ ಎಲ್ಲಾ ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು, ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ವಿಶೇಷ ಅತಿಥಿಯಾಗಿ ಜನ ಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರು ಉತ್ತಮವಾದ ಮಾಹಿತಿ ಮಾರ್ಗದರ್ಶನವನ್ನು ನೀಡಿರುತ್ತಾರೆ.
