ಮದ್ದೂರು ತಾಲೂಕಿನಲ್ಲಿ ನಡೆದ 1500 ನೇ ದಾಖಲೆಯ ಮ.ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯಿತು. ನೂತನವಾಗಿ ರಚನೆಯಾದ 6 ನವಜೀವನ ಸಮಿತಿಯನ್ನು ಉದ್ಘಾಟನೆ ಮಾಡಿ ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಪಿ.ಗಂಗಾಧರ ರೈ ಸರ್ ಮಾತಾಡಿ.. ನಿಮ್ಮ ಬದುಕು ಗಂಧದ ಕೊರಡಿನಂತೆ ಸುಗಂಧ ಬರುತ್ತೆ. ಮಂಜುನಾಥ ಸ್ವಾಮಿಯ ಪ್ರಸಾದ ನಿಮ್ಮ ಮನೆಗೆ ಬಂದಿದೆ , ಮದ್ಯವರ್ಜನ ಶಿಬಿರದ ಇತಿಹಾಸದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ, ಕ್ಷೇತ್ರದಿಂದ ಪರಮ ಪೂಜ್ಯರ ಆಶೀರ್ವಚನ ಮತ್ತು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮುಖ್ಯ ನಿರ್ವಹಣಾಧಿಕಾರಿಗಳ ಮಾರ್ಗದರ್ಶನ ಸಿಕ್ಕಿರುವುದು ನಿಮ್ಮ ಪುಣ್ಯ ಎಂದು ಹೇಳಿದರು. ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಶ ವಿ ರಾಮಸ್ವಾಮಿಯವರು ಸಮಾಜ ಮತ್ತು ಕುಟುಂಬ ಕಟ್ಟುವ ಕೆಲಸವನ್ನು ಮಾಡುವ ವ್ಯಕ್ತಿ ಇದ್ದರೆ ಅದು ಪೂಜ್ಯ ಹೆಗ್ಗಡೆಯವರು ಎಂದು ಬಣ್ಣಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಗುರುಚರಣ್,ಮಂಡ್ಯ ಜಿಲ್ಲಾ ಅಧ್ಯಕ್ಷರಾದ ಲಿಂಗೇಗೌಡ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂದರ್ಶ, ಗೌರವಾಧ್ಯಕ್ಷ ಸೋಮೇಗೌಡ , ನಿರ್ದೇಶಕ ವಿನಯ್ ಕುಮಾರ್ ಸುವರ್ಣ ,ಯೋಜನಾಧಿಕಾರಿ ಯೋಗೀಶ್, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕುಟುಂಬ ದಿನ ಕಾರ್ಯಕ್ರಮ ನೆರವೇರಿತು ಜ. ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ ಪಾಯಸ್ ಫೋನ್ ಕರೆಯ ಮೂಲಕ ಮಾಹಿತಿ ಮಾರ್ಗದರ್ಶನ ನೀಡಿದ,ಬಳಿಕ ಭಾಸ್ಕರ್ ಮುಂದುವರಿಸಿದರು.
