ಬೆಂಗಳೂರು ಪ್ರಾದೇಶಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ 1481ನೇ ಮದ್ಯವರ್ಜನ ಶಿಬಿರ ದಿನಾಂಕ 16.11.2021 ರಂದು ಪ್ರಾರಂಭವಾಯಿತು.

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ ದೊಡ್ಡಬಳ್ಳಾಪುರ, ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ವ್ಯವಸ್ಥಾಪನ ಸಮಿತಿ ದೊಡ್ಡಬಳ್ಳಾಪುರ ಕಸಬಾ ವಲಯ, ಸ್ಥಳೀಯ ನಗರಸಭೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಸಮಸ್ತ ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಪರಮಪೂಜ್ಯ ರಾಜಶ್ರೀ ಡಾ ಡಿ ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಹೆಗಡೆಯವರ ಮಾರ್ಗದರ್ಶನದೊಂದಿಗೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರದ ಲೈಲಾ ಬೆಳ್ತಂಗಡಿಯಲ್ಲಿ ಕಾರ್ಯಕ್ರಮದ ಅಂಗವಾಗಿ 1481 ಒಮ್ಮೆ ಮದ್ಯವರ್ಜನ ಶಿಬಿರ ದಿನಾಂಕ 16.11.2021 ರಿಂದ 23.11.2021 ತನಕ ನಡೆಯಲಿದೆ. ಜಿಲ್ಲಾ ಜನಜಾಗೃತಿ ವೇದಿಕೆ ಬೆಂಗಳೂರು ಗ್ರಾಮಾಂತರ ನಗರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಬಿ.ಕೆ ನಾರಾಯಣಸ್ವಾಮಿ ಯವರು ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಕುಲ್ ಹೇಮರಾಜ್ ದೊಡ್ಡಬಳ್ಳಾಪುರ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರು ಸತೀಶ್ ನಾಯ್ಕ್ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರಾದ ಶ್ರೀಮತಿ ವೀಣಾ ರಮೇಶ್, ಜಿಲ್ಲಾ ಪದಾಧಿಕಾರಿಗಳ ಶ್ರೀಮತಿ ಕೋಕಿಲ, ಶ್ರೀ ನರಸಿಂಹರಾಜು, ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಬಗ್ಗೆ, ಕಾರ್ಯಕ್ರಮದ ಬಗ್ಗೆ, ಪ್ರಸ್ತಾವನೆಯನ್ನು ಜನಜಾಗೃತಿ ವೇದಿಕೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಯಾದ ಗಣೇಶ್ ಆಚಾರ್ಯ ನೆರವೇರಿಸಿದರು. ಶಿಬಿರಾಧಿಕಾರಿ ದೇವಿಪ್ರಸಾದ್, ಆರೋಗ್ಯ ಸಹಾಯಕಿಯಾಗಿ ಶ್ರೀಮತಿ ನೇತ್ರಾವತಿ, ಒಂದು ವಾರ ಕರ್ತವ್ಯ ನಿರ್ವಹಿಸಲಿದ್ದಾರೆ. ತಾಲೂಕು ಯೋಜನಾಧಿಕಾರಿ ಶ್ರೀಮತಿ ಸುಧಾ ಭಾಸ್ಕರ್ ಅವರು ಸ್ವಾಗತಿಸಿ, ಜನಜಾಗೃತಿ ಮೇಲ್ವಿಚಾರಕರಾದ ರಾಜೇಶ್ ಮತ್ತು ಶ್ರೀಮತಿ ವಿಜಯ ಅವರು ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕರಾದ ಗಿರೀಶ್ ಧನ್ಯವಾದವಿತ್ತರು. ಬಳಿಕ ಮದ್ಯವ್ಯಸನಿಗಳ ಆರೋಗ್ಯ ತಪಾಸಣೆಯನ್ನು ಮಾಡಿ ಮನ ಪರಿವರ್ತನ ಮಾಹಿತಿ ಮಾರ್ಗದರ್ಶನ ನೀಡಲಾಯಿತು. ಸಂಜೆ ಭಜನಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭ ಸ್ಥಳೀಯ ನವಜೀವನ ಪೋಷಕರು, ಸೇವಾ ಪ್ರತಿನಿಧಿಗಳು, ಮೇಲ್ವಿಚಾರಕರು ಹಾಗೂ ನವಜೀವನ ಸಮಿತಿಯ ಸದಸ್ಯರು ಕರ್ತವ್ಯ ನಿರ್ವಹಿಸಿದರು.