ಚನ್ನರಾಯಪಟ್ಟಣ ಜಿಲ್ಲಾ ವ್ಯಾಪ್ತಿಯ ತರಬೇತಿಯನ್ನು ಜನಜಾಗೃತಿ ಕಾರ್ಯಕ್ರಮದ ಪ್ರಾದೇಶಿಕ ನಿರ್ದೇಶಕರಾದ ಮಾನ್ಯ ವಿವೇಕ್ ವಿನ್ಸೆಂಟ್ ಪಾಯಸ್ ರವರು ಉದ್ಘಾಟಿಸಿ ಜನಜಾಗೃತಿಯ ಧ್ಯೇಯ, ಉದ್ದೇಶ, ಅನುಷ್ಠಾನ, ಇದಕ್ಕಾಗಿ ಪೂಜ್ಯ ಹೆಗ್ಗಡೆ ದಂಪತಿಗಳು ತೊಟ್ಟಿರುವ ಪಣ , ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು ರೂಪಿಸಿರುವ ಕಾರ್ಯಕ್ರಮಗಳ ಕುರಿತು ವಿವರಿಸಿ. ಮದ್ಯಪಾನ ಹಾಗೂ ಮಾದಕ ವಸ್ತುಗಳ ಮಾಯಾಜಾಲ ಇದರಿಂದಾಗಿ ಸಮಾಜದಲ್ಲಿ ಆಗುತ್ತಿರುವ ಅನಾಹುತಗಳನ್ನು ಕಣ್ಣಿಗೆ ಕಾಣುವ ರೀತಿಯಲ್ಲಿ ತರಬೇತಿಗೆ ಬಂದ ಸಂಪನ್ಮೂಲ ವ್ಯಕ್ತಿಗಳಿಗೆ ಉದಾಹರಣೆ ಸಹಿತ ತಿಳಿಸಿದರು, ತರಬೇತಿಯಲ್ಲಿ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ಜನಜಾಗೃತಿ ಸದಸ್ಯರಾದ ಉಮೇಶ್, ಯೋಜನಾಧಿಕಾರಿಗಳು, ಶಿಬಿರಾಧಿಕಾರಿ, ಆರೋಗ್ಯ ಕಾರ್ಯಕರ್ತೆ ಭಾಗವಹಿಸಿದ್ದರು. ತರಬೇತಿಯನ್ನು ಪಡೆದ ವ್ಯಕ್ತಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು ತರಬೇತಿಗೆ ಆಗಮಿಸಿದವರು ಅನಿಸಿಕೆ ವ್ಯಕ್ತಪಡಿಸಿ ನಿಜವಾಗಿಯೂ ಈ ತರಬೇತಿ ಅರ್ಥಗರ್ಭಿತವಾಗಿ ನಡೆದಿದೆ ನಮಗೆ ಸಿಕ್ಕಿದ ಅವಕಾಶದ ಮಾಹಿತಿಯನ್ನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಗಳನ್ನು ನಡೆಸಿ ಮುಟ್ಟಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
