ಗಾಂಧಿ ಜಯಂತಿ ಪ್ರಯುಕ್ತ ಶಿರಸಿ ತಾಲೂಕಿನ ಮಾರಿಕಾಂಬಾ ಕಲ್ಯಾಣಮಂಟಪದಲ್ಲಿ ಪಾನಮುಕ್ತ ಅಭಿನಂದನೆ ಹಾಗೂ ಜನಜಾಗೃತಿ ಸಮಾವೇಶ ಕಾರ್ಯಕ್ರಮ

Janajagurthi Vedike News

ಗಾಂಧಿ ಜಯಂತಿ ಪ್ರಯುಕ್ತ ಶಿರಸಿ ತಾಲೂಕಿನ ಮಾರಿಕಾಂಬಾ ಕಲ್ಯಾಣಮಂಟಪದಲ್ಲಿ ಪಾನಮುಕ್ತ ಅಭಿನಂದನೆ ಹಾಗೂ ಜನಜಾಗೃತಿ ಸಮಾವೇಶ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಆರ್ ಜಿ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸುಭಾಸ್ ನಾಯಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಿಎಸ್ಐ ಅಧಿಕಾರಿ ರಾಜಕುಮಾರ್. ಲೋಕ ಮಿತ್ರ ಫೌಂಡೇಶನ್ ನ ಅಧ್ಯಕ್ಷರಾದ ಶ್ರೀ ರಾಮು ಕಿಣಿ. ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀಮತಿ ಗೌರಿ ನಾಯಕ ಉಪಸ್ಥಿತರಿದ್ದರು. ಜನಜಾಗೃತಿ ಯೋಜನಾಧಿಕಾರಿ ಶ್ರೀ ತಿಮ್ಮಯ್ಯ ನಾಯಕ ನವ ಜೀವನ ಸದಸ್ಯರಿಗೆ ಪ್ರೇರಣೆ ಹಾಗೂ ಮಾರ್ಗದರ್ಶನ ನೀಡಿದರು. ಸಾಧಕ ಮೂರು ಜನ ನವಜೀವನ ಸಮಿತಿ ಸದಸ್ಯರಿಗೆ ಜಾಗೃತಿ ಮಿತ್ರ ಪ್ರಶಸ್ತಿ ಪ್ರಧಾನ ಮಾಡಲಾಯಿತು.. ಹಾಗೂ ಉಳಿದ ಸದಸ್ಯರನ್ನು ಗೌರವಿಸಲಾಯಿತು. ಒಕ್ಕೂಟದ ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳು ಹಾಗೂ ತಾಲೂಕಿನ ನವಜೀವನ ಸಮಿತಿಯ ಸದಸ್ಯರು ಕುಟುಂಬದವರು ಭಾಗವಹಿಸಿದ್ದರು.