ವಿಜಯಪುರ ತಾಲ್ಲೂಕಿನಲ್ಲಿ 152ನೇ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ

Janajagurthi Vedike News

ವಿಜಯಪುರ ತಾಲ್ಲೂಕಿನಲ್ಲಿ 152ನೇ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಶ್ರೀಮತಿ ಸಂಗೀತಾ.S. ಪೋಳ.ಮಾಜಿ ಮಹಾಪೌರರು ಉದ್ಘಾಟನೆ ಮಾಡಿದರು, ಕಾರ್ಯಕ್ರಮದ ಅಧ್ಯಕ್ಷ ರಾಗಿ ಶ್ರೀ S.A.ಜಿದ್ದಿ .ಅಧ್ಯಕ್ಷರು ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಅವರು ಮಾತನಾಡಿ ದುಶ್ಚಟದಿಂದ ಇಂದಿನ ದಿನದಲ್ಲಿ ಹೆಚ್ಚು ಅಪರಾದಗಳು ಹೆಚ್ಚುತಿದ್ದು ಇದನ್ನು ತಡೆಯಲು ಯುವ ಪೀಳಿಗೆ ಗಾಂಧಿ ತತ್ವ ಸಿದ್ಧಾಂತ ಅಳವಡಿಸಿಕೊಳ್ಳಬೇಕು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರು ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು ದೇಶಕ್ಕೆ ಮಾದರಿ ಎಂದು ತಿಳಿಸಿದರು ಅತಿಥಿಯಾಗಿ ಶ್ರೀ ಕೆ .ಆರ್. ಜಾಧವ್ ಪ್ರಾಂಶುಪಾಲರು ಮಾತನಾಡಿ ರಾಜ್ಯದಲ್ಲಿ ಪ್ರಸ್ತುತ ಪರಸ್ಥಿತಿಯಲ್ಲಿ ಪ್ರತಿ ಗ್ರಾಮದಲ್ಲಿ ಮಧ್ಯ ಸಿಗುತ್ತಿದ್ದು ಇದರಿಂದ ಸಣ್ಣ ವಯಸ್ಸಿನವರು ಮದ್ಯಕ್ಕೆ ದಸರಾಗುತ್ತಿದ್ದು ವಿಷಾದ ವ್ಯಕ್ತಪಡಿಸಿದರು ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ರಾಜೇಂದ್ರ *ಕುಮಾರ್ .ಬಿರಾದಾರ್ ದುಶ್ಚಟದಿಂದ ಆಗುವ ತೊಂದರೆ ಕುರಿತು ಮಾಹಿತಿ ನೀಡಿದರು ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ಜನ ಜಾಗೃತಿ ವೇದಿಕೆಯ ಯೋಜನಾಧಿಕಾರಿ ಕಲ್ಲನಗೌಡ ತಾಲ್ಲೂಕು ಯೋಜನಾಧಿಕಾರಿ ರಿಯಾಜ ಅತ್ತಾರ ಮೇಲ್ವಿಚಾರಕರು ಸೇವಾಪ್ರತಿನಿಧಿಗಳು ಸಂಘದ ಸದಸ್ಯರು ಇದ್ದರು.